ಬಾಯಿಕೆಟ್ಟು ನಾಟಿಕೋಟಿ, ಕಾಲುಸೂಪ್​ ಸವಿದ ಸಿಎಂ

ತುಮಕೂರಿನ ಕೆ.ಎನ್​.ರಾಜಣ್ಣ ಮನೆಯಲ್ಲಿ ನಾಟಿಕೋಳಿ ಸವಿದ ಸಿಎಂ ಸಿದ್ದರಾಮಯ್ಯ
ತುಮಕೂರಿನ ಕೆ.ಎನ್​.ರಾಜಣ್ಣ ಮನೆಯಲ್ಲಿ ನಾಟಿಕೋಳಿ ಸವಿದ ಸಿಎಂ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಆಪ್ತ ಶಾಸಕನ ಮನೆಯಲ್ಲಿ ನಾಟಿಕೋಟಿ, ಕಾಲುಸೂಪ್​
  • ಮಾಜಿ ಸಚಿವ ಕೆ.ಎನ್​.ರಾಜಣ್ಣ ಮನೆಯಲ್ಲಿ ಊಟ
  • ಸಿಎಂ ಸಿದ್ದರಾಮಯ್ಯಗೆ ಆತಿಥ್ಯ ನೀಡಿದ ಕುಟುಂಬ
ತುಮಕೂರು: ನಿರೀಕ್ಷೆಯಂತೆಯೇ ಸಿಎಂ ಸಿದ್ದರಾಮಯ್ಯ ತುಮಕೂರು ಭೇಟಿ ಸಂದರ್ಭದಲ್ಲಿ ಪರಮಾಪ್ತ ಕೆ.ಎನ್​.ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಇಷ್ಟದ ಭೋಜನ ಸವಿದರು.
ಕರ್ನಾಟಕ ಕ್ರೀಡಾಕೂಟ&2026 ಉದ್ಘಾಟನೆ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಆಗಮಿಸಿದ ಸಿಎಂ ಆಪ್ತರೊಂದಿಗೆ ನೇರವಾಗಿ ಕೆ.ಎನ್​.ರಾಜಣ್ಣ ಅವರ ಕ್ಯಾತಸಂದ್ರ ಸಮೀಪದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ನಾಟಿ ಕೋಳಿ ಹಾಗೂ ಕಾಲುಸೂಪ್​ ಸವಿದರು. ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್​ ಶಾಸಕರು ಸಾಥ್​ ನೀಡಿದರು.
ಊಟ ಮುಗಿಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಕೆಲವು ದಿನಗಳಿಂದ ಜ್ವರವಿತ್ತು, ಬಾಯಿಕೆಟ್ಟಿದ್ದರಿಂದ ಇಷ್ಟಪಟ್ಟು ನಾನ್​ವೆಜ್​ ಊಟ ಮಾಡಿದೆ ಎಂದರು.
ರಾಜ್ಯ ಸಚಿವ ಸಂಪುಟ ಪುನರಚನೆ ಸಂದರ್ಭದಲ್ಲಿ ಕೆ.ಎನ್​.ರಾಜಣ್ಣಗೆ ಸಿಹಿ ಸುದ್ದಿ ನೀಡುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾವಾಗಲೂ ರಾಜಣ್ಣನ ಜೊತೆ ಸಿಹಿ ಸುದ್ದಿನೆ ಇರೋದು, ಹೈಕಮಾಂಡ್​ ಜತೆ ಮಾತನಾಡುತ್ತೇನೆ ಎಂದು ನಕ್ಕರು.
ಈ ಸಂದರ್ಭದಲ್ಲಿ ಕೆ.ಎನ್​.ರಾಜಣ್ಣ ಅಭಿಮಾನಿಗಳು ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿಸಿ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net