ರಾಜಣ್ಣ ಮನೆಯಲ್ಲಿ ಸಿದ್ದರಾಮಯ್ಯ ಲಂಚ್​

ಮಾಜಿ ಸಚಿವ ಕೆ.ಎನ್​.ರಾಜಣ್ಣ ನಿವಾಸದಲ್ಲಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ.
ಮಾಜಿ ಸಚಿವ ಕೆ.ಎನ್​.ರಾಜಣ್ಣ ನಿವಾಸದಲ್ಲಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಬಾಡೂಟ ಸವಿದ ಸಿಎಂ
  • ನಾಟಿಕೋಳಿ, ಕಾಲುಸೂಪ್​
  • ಜತೆಯಲಿ ಪರಂ, ಕೆಎನ್ನಾರ್​
ತುಮಕೂರು: ನಿರೀಕ್ಷೆ ಯಂತೆಯೇ ಸಿಎಂ ಸಿದ್ದರಾಮಯ್ಯ ತುಮಕೂರು ಭೇಟಿ ಸಂದರ್ಭದಲ್ಲಿ ಪರಮಾಪ್ತ ಕೆ.ಎನ್​.ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಇಷ್ಟದ ಭೋಜನ ಸವಿದರು.
ಕರ್ನಾಟಕ ಕ್ರೀಡಾಕೂಟ-2026 ಉದ್ಘಾಟನೆ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಆಗಮಿಸಿದ ಸಿಎಂ ಆಪ್ತರೊಂದಿಗೆ ನೇರವಾಗಿ ಕೆ.ಎನ್​.ರಾಜಣ್ಣ ಅವರ ಕ್ಯಾತಸಂದ್ರ ಸಮೀಪದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ನಾಟಿ ಕೋಳಿ ಹಾಗೂ ಕಾಲುಸೂಪ್​ ಸವಿದರು. ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್​ ಶಾಸಕರು ಇದ್ದರು.
ಊಟ ಮುಗಿಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಕೆಲವು ದಿನಗಳಿಂದ ಜ್ವರವಿತ್ತು, ಬಾಯಿಕೆಟ್ಟಿದ್ದರಿಂದ ಇಷ್ಟಪಟ್ಟು ನಾನ್​ವೆಜ್​ ಊಟ ಮಾಡಿದೆ ಎಂದರು.
ರಾಜ್ಯ ಸಚಿವ ಸಂಪುಟ ಪುನರಚನೆ ಸಂದರ್ಭದಲ್ಲಿ ಕೆ.ಎನ್​.ರಾಜಣ್ಣಗೆ ಸಿಹಿ ಸುದ್ದಿ ನೀಡುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾವಾಗಲೂ ರಾಜಣ್ಣನ ಜೊತೆ ಸಿಹಿ ಸುದ್ದಿನೆ ಇರೋದು, ಹೈಕಮಾಂಡ್​ ಜತೆ ಮಾತನಾಡುತ್ತೇನೆ ಎಂದು ನಕ್ಕರು.
ಈ ಸಂದರ್ಭದಲ್ಲಿ ಕೆ.ಎನ್​.ರಾಜಣ್ಣ ಅಭಿಮಾನಿಗಳು ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net