ಶಾಲೆಗಳಲ್ಲಿ ಮತ್ತೆ ಚಿಣ್ಣರ ಕಲರವ

Children's riots again in schools
Children's riots again in schools
Published on
ವಿಜಯವಾಣಿ ಸುದ್ದಿಜಾಲ ಹುಳಿಯಾರು
ಬೇಸಿಗೆ ರಜೆ ನಂತರ ಸೋಮವಾರ ತಾಲೂಕಿನಾದ್ಯಂತ ಶಾಲೆಗಳು ಪುನರಾರಂಭವಾಗಿವೆ. ನೂತನ ಶೈಕ್ಷಣಿಕ ವರ್ಷದ ಆರಂಭವನ್ನು ಶಾಲಾ ಮಕ್ಕಳು ಮತ್ತು ಶಿಕ್ಷಕರು ಒಗ್ಗೂಡಿ ಸಂಭ್ರಮದಿಂದ ಬರಮಾಡಿಕೊಂಡರು.
ಎರಡು ದಿನಗಳಿಂದ ಶಿಕ್ಷಕರು ಮಕ್ಕಳ ಸ್ವಾಗತಕ್ಕೆ ಸಿದ್ಧತೆ ಮಾಡಿದ್ದರು. ಶಾಲಾ ಕೊಠಡಿಗಳು, ಶೌಚಗೃಹ, ಅಡುಗೆ ಮನೆ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಅಂದಗೊಳಿಸಿದ್ದರು. ತಳಿರು, ತೋರಣ ಹಾಗೂ ರಂಗೋಲಿಯಿಂದ ಸಿಂಗರಿಸಿದ್ದರು.
ವಿದ್ಯಾರ್ಥಿಗಳು ಬೆನ್ನಿಗೆ ಪುಸ್ತಕಗಳ ಚೀಲ ಹಾಕಿಕೊಂಡು ಲಗುಬಗೆಯಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಶಿಕ್ಷಕರು ಹೂ ಕೊಟ್ಟು ಮಕ್ಕಳನ್ನು ಸ್ವಾಗತಿಸಿದರು. ಹೊಸ ತರಗತಿಗೆ ತೇರ್ಗಡೆಗೊಂಡಿರುವ ಮಕ್ಕಳಲ್ಲಿ ಹೆಚ್ಚು ಸಡಗರ ಕಂಡು ಬಂತು. ಶಿಕ್ಷಕರು ಶಾಲೆಯ ಪ್ರವೇಶ ದ್ವಾರದಲ್ಲೇ ನಿಂತು ಮುಗುಳ್ನಗೆಯೊಂದಿಗೆ ಮಕ್ಕಳ ಕುಶಲೋಪರಿ ವಿಚಾರಿಸಿದರು.
ಹೆಚ್ಚು ಕಡಿಮೆ ಎರಡು ತಿಂಗಳು ಮೌನವಾಗಿದ್ದ ಶಾಲೆಗಳಲ್ಲಿ ಮತ್ತೆ ಚಿಣ್ಣರ ಕಲರವ ಕೇಳಿಬಂತು. ಮಧ್ಯಾಹ್ನದ ಬಿಸಿಯೂಟದೊಂದಿಗೆ ಮಕ್ಕಳಿಗೆ ವಿಶೇಷ ಸಿಹಿ ಉಣಬಡಿಸಲಾಯಿತು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.
1 ಹುಳಿಯಾರು 2
ಹುಳಿಯಾರು ಹೋಬಳಿಯ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net