ಗಡಿ ತಪಾಸಣಾ ಕೇಂದ್ರಗಳಲ್ಲಿ ಅವ್ಯವಸ್ಥೆ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಡಿಯಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಗೆ ಸ್ಥಾಪಿಸಲಾಗಿರುವ ಚೆಕ್​ಪೋಸ್ಟ್​ನಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿದರು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಡಿಯಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಗೆ ಸ್ಥಾಪಿಸಲಾಗಿರುವ ಚೆಕ್​ಪೋಸ್ಟ್​ನಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗಡಿ ತಪಾಸಣಾ ಕೇಂದ್ರಗಳಲ್ಲಿ ಅವ್ಯವಸ್ಥೆ
ಗಡಿ ತಪಾಸಣಾ ಕೇಂದ್ರಗಳಲ್ಲಿ ಅವ್ಯವಸ್ಥೆ
ಪಾವಗಡ: ಕರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಚೆಕ್​ಪೋಸ್ಟ್​ ಸ್ಥಾಪಿಸಿಸಲಾಗಿದೆ. ಆದರೆ ಆರೋಗ್ಯ ತಪಾಸಣೆಗೆ ಕನಿಷ್ಠಪ ಶುಶ್ರೂಷಕಿಯನ್ನು, ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸದೆ ತಾಲೂಕು ಆಡಳಿತ ರ್ನಿಲಕ್ಷ$್ಯವಹಿಸಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕರೋನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಮೃತರ ಸಂಪರ್ಕದಲ್ಲಿದ್ದ 9 ಮಂದಿಗೆ ಪಾಸಿಟಿವ್​ ವರದಿಯಾದ ಬೆನ್ನಲ್ಲೆ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ತಹಸೀಲ್ದಾರ್​ ವೈ. ರವಿ ಚೆಕ್​ಪೋಸ್ಟ್​ ಬಳಿ ಆರೋಗ್ಯ ಇಲಾಖೆ, ಗ್ರಾಪಂ ಸಿಬ್ಬಂದಿಗಳನ್ನು ನೇಮಿಸಿ ಆಂಧ್ರದಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ನಡೆಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕಿನ ತುಮಕೂರು ರಸ್ತೆಯ ರಾಜವಂತಿ, ನಾಲಮಡಿಕೆ, ಬಳ್ಳಾರಿ ರಸ್ತೆಯ ಕರ್ನಾಟಕ ಗಡಿಯ ಗ್ರಾಮ ನಾಗಲಾಪುರ, ಆಮರಾಪುರಕ್ಕೆ ಸಂಪರ್ಕ ಕಲ್ಪಿಸುವ ಅರಸೀಕೆರೆ ಹಾಗೂ ರೋದ್ದ ಸಂಪರ್ಕ ಕಲ್ಪಿಸುವ ಟಿ.ಎನ್​ ಪೇಟೆ ಸೇರಿ 5 ಕಡೆಗಳಲ್ಲಿ ತಾತ್ಕಾಲಿಕ ತಪಾಸಣಾ ಕೇಂದ್ರಗಳನ್ನ ಸ್ಥಾಪಿಸಿಸಲಾಗಿದೆ.
ಆರೋಗ್ಯ ತಪಾಸಣೆಗೆ ಆಶಾ ಕಾರ್ಯಕರ್ತೆ ಮತ್ತು ಗ್ರಾಪಂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಪಾವಗಡ&ಬಳ್ಳಾರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬರುವ ವಾಹನಗಳ ತಡೆಗೆ ಯಾವುದೇ ಬ್ಯಾರಿಕೇಡ್​ ವ್ಯವಸ್ಥೆ ಮಾಡಿಲ್ಲ. ಅತೀ ಹೆಚ್ಚು ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು, ವೇಗವಾಗಿ ಬರುವ ವಾಹನಗಳು ನಿಲ್ಲಿಸದೇ ಮುನ್ನುಗುತ್ತಿವೆ. ಸಿಬ್ಬಂದಿ ಇದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಇನ್ನು ಅರಸೀಕೆರೆ ಚೆಕ್​ಪೋಸ್ಟ್​ಗೆ ನಿಯೋಜಿಸಲಾದ ಸಿಬ್ಬಂದಿ ಬೆಳಗ್ಗೆ 8ರಿಂದ 11 ಗಂಟೆಯ ನಂತರ ಯಾರು ಬರುವುದಿಲ್ಲವೆಂದು ಮನೆ ಸೇರುತ್ತಿದ್ದಾರೆ. ಇನ್ನೂ ಕೆಲ ಚೆಕ್​ಪೋಸ್ಟ್​ಗಳಲ್ಲಿ ಕುಡಿಯುವ ನೀರು ಸೌಕರ್ಯವಿಲ್ಲ, ಥರ್ಮೋ ಮೀಟರ್​ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ನಿಯೊಜನೆಗೊಂಡಿರುವ ಸಿಬ್ಬಂದಿ ಪೊಲೀಸ್​ ಅಲ್ಲದಿರುವುದರಿಂದ ವೇಗವಾಗಿ ಬರುವ ವಾಹನಗಳನ್ನು ತಡೆಯಲು ಸಾಧ್ಯವಾಗದೇ ಕೇವಲ ಜಿಪಿಎಸ್​ ೋಟೊ ತೆಗೆದು ಇಲಾಖೆ ಅಧಿಕಾರಗಳಿಗೆ ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.
ಆರೋಗ್ಯ, ವ್ಯವಹಾರ ಸೇರಿ ಸೋಮವಾರ ನಡೆಯುವ ಕುರಿ, ಮೇಕೆ, ತರಕಾರಿ ಸಂತೆಗೆ ಸಾವಿರಾರು ಮಂದಿ ಆಂಧ್ರದಿಂದ ಪಾವಗಡಕ್ಕೆ ಬರುತ್ತಾರೆ. ಆದ್ದರಿಂದ ಆರೋಗ್ಯ ತಪಾಸಣೆ ಜತೆಗೆ ಪಟ್ಟಣ, ಹೋಬಳಿ ಕೇಂದ್ರಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೆ ಚೆಕ್​ಪೊಸ್ಟ್​ಗಳಲ್ಲಿ ಪೊಲೀಸ್​ ಸಿಬ್ಬಂದಿ ನಿಯೋಜಿಸುವ ಜತೆಗೆ ಮೂಲ ಸೌಕರ್ಯ, ಔಷಧೋಪಚಾರ, ಸಲಕರಣೆಗಳನ್ನು ಒದಗಿಸಿ ಆಂಧ್ರದಿಂದ ಬರುವ ಸಾರ್ವಜನಿಕರನ್ನು ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಪಡಿಸಲು ತಾಲೂಕು ಆಡಳಿತ ಅಗತ್ಯ ಕ್ರಮವಹಿಸಬೇಕಿದೆ.
17 ಪಿವಿಡಿ 01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net