ಇನ್ನೆರಡು ತಿಂಗಳಲ್ಲಿ ಪಾವಗಡಕ್ಕೆ ರೈಲು

ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಗೇಟ್​ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ಎಸ್​.ಆರ್​.ಶ್ರೀನಿವಾಸ್​, ಎಸ್​.ಡಿ.ದಿಲೀಪ್​ ಕುಮಾರ್​ ಮತ್ತಿತರರು ಇದ್ದರು.
ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಗೇಟ್​ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ಎಸ್​.ಆರ್​.ಶ್ರೀನಿವಾಸ್​, ಎಸ್​.ಡಿ.ದಿಲೀಪ್​ ಕುಮಾರ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ವಿ.ಸೋಮಣ್ಣ
  • ಗುಬ್ಬಿ ಕಳ್ಳಿಪಾಳ್ಯ ಬಳಿ ಆರ್​ಯುಬಿಗೆ ಶಂಕುಸ್ಥಾಪನೆ
  • ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಪ್ರಗತಿ
ತುಮಕೂರು: ಇನ್ನೆರಡು ತಿಂಗಳಲ್ಲಿ ರಾಯದುರ್ಗದಿಂದ ಪಾವಗಡಕ್ಕೆ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಲೆವೆಲ್​ ಕ್ರಾಸಿಂಗ್​ ಬಳಿ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಯದುರ್ಗ-ತುಮಕೂರು ರೈಲು ಯೋಜನೆಯ ಕಾಮಗಾರಿ ವೇಗ ನಡೆಯುತ್ತಿದ್ದು. ಈಗಾಗಲೇ ಪರೀಾರ್ಥ ಚಾಲನೆ ಮಾಡಲಾಗಿದೆ. ಈ ಯೋಜನೆಯ ಭಾಗವಾದ ಪಾವಗಡ-&ಮಡಕಸಿರ&-ಮಧುಗಿರಿ-&ಕೊರಟಗೆರೆ& ಊರುಕೆರೆ ರೈಲು ಮಾರ್ಗ ಕಾಮಗಾರಿಯು ಸಹ ತ್ವರಿತವಾಗಿ ಪೂರ್ಣಗೊಳ್ಳಲಿದೆ. ಅಲ್ಲದೆ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ ಎಂದರು.
ತುಮಕೂರು ಬಳಿಯ ತಿಮ್ಮರಾಜನಹಳ್ಳಿಯಲ್ಲಿ ಇಂಟಿಗ್ರೇಟೆಡ್​ ಲಾಜಿಸ್ಟಿಕ್ಸ್​ ರ್ಟಮಿನಲ್​ ಬರಲಿದೆ. ಇದರಿಂದ ಲಾಂತರ ಜರಿಗೆ ಅನುಕೂಲಾಗಲಿದ್ದು ಈ ಪ್ರದೇಶದ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ತುಮಕೂರು&ರಾಯದುರ್ಗ, ತುಮಕೂರು&ದಾವಣಗೆರೆ ರೈಲ್ವೆ ಯೋಜನೆಗಳಿಂದ ಕೈಗಾರಿಕಾ ಕಾರಿಡಾರ್​ಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
10.86 ಕೋಟಿ ವೆಚ್ಚದ ಆರ್​ಯುಬಿ: ಕಳ್ಳಿಪಾಳ್ಯ ಗೇಟ್​ ಬದಲಿಗೆ ರಸ್ತೆ ಕೆಳ ಸೇತುವೆಯನ್ನು (ಆರ್​ಯುಬಿ) 10.86 ಕೋ.ರೂ., ವೆಚ್ಚದಲ್ಲಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲಾ ರಸ್ತೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ಕಾಮಗಾರಿಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುಮದು ಎಂದು ಸೋಮಣ್ಣ ಹೇಳಿದರು.
ಈ ಭಾಗದ ಸುಮಾರು 30 ರಸ್ತೆ ಮೇಲ್ಸೇತುವೆ, ಕೆಳಸೇತುವೆ ಯೋಜನೆಗಳ ಅನುಷ್ಠಾನವು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಸಾಧ್ಯವಾಗಿದೆ. ಕಾಮಗಾರಿಗಳು ವೇಗ ಪಡೆದುಕೊಳ್ಳಲು ಇದು ಕಾರಣವಾಗಿದೆ. ವಿಶೇಷವಾಗಿ ಭೂ ಸ್ವಾಧಿನಕ್ಕೆ ಅನುಕೂಲಾಗುವಂತೆ ಜಿಲ್ಲಾಡಳಿತ ನೀಡಿದ ಸಹಕಾರಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​, ಬಿಜೆಪಿ ಮುಖಂಡರಾದ ಎಸ್​.ಡಿ.ದಿಲೀಪ್​ ಕುಮಾರ್​, ಚಂದ್ರಶೇಖರ್​ ಬಾಬು, ಜೆಡಿಎಸ್​ ಮುಖಂಡರಾದ ಬಿ.ಎಸ್​.ನಾಗರಾಜು, ಜಿ.ಎನ್​.ಬೆಟ್ಟಸ್ವಾಮಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವಿಣ ಕಾತರಕಿ ಮತ್ತಿತರರು ಉಪಸ್ಥಿತರಿದ್ದರು.
ಯಶವಂತಪುರ ರೈಲ್ವೆ ನಿಲ್ದಾಣ ಅಭಿವೃದ್ಧಿ
ಯಶವಂತಪುರ ಹಾಗೂ ಬೆಂಗಳೂರು ಕಂಟೋನ್ಮೆಂಟ್​ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಕೆಎಸ್​ ಆರ್​ ಬೆಂಗಳೂರು ನಿಲ್ದಾಣ ಅಭಿವೃದ್ಧಿ ಕಾರ್ಯಗಳನ್ನು ಕೃಗೆತ್ತಿಕೊಳ್ಳಲಾಗುವುದು. ಅಮೃತ್​ ಭಾರತ್​ ನಿಲ್ದಾಣ ಯೋಜನೆಡಿ ರಾಜ್ಯದಾದ್ಯಂತ 64 ರೈಲ್ವೆ ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net