ಸರ್ಕಾರ ರೂಪಿಸುವ ಯೋಜನೆಗಳು, ಕ್ಷೇತ್ರ ವಿಂಗಡಣೆ ಎಲ್ಲವೂ ಜನಸಂಖ್ಯೆ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ. ಹಾಗಾಗಿ, ಈ ಕಾರ್ಯದಲ್ಲಿ ನಿಯೋಜಿತರಾದ ಅಧಿಕಾರಿ ಸಿಬ್ಬಂದಿ ಯಾವುದೇ ಪೂರ್ವಗ್ರಹವಿಲ್ಲದೆ, ಸರಿಯಾದ ಮಾಹಿತಿಯನ್ನು ಕ್ರೋಢಿಕರಿಸಬೇಕು. 1948ರ ಜನಗಣತಿ ಕಾಯ್ದೆಯ ಪ್ರಕಾರ ಜನಗಣತಿ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. 1972ರಲ್ಲಿ ಮೊದಲ ಗಣತಿ ನಡೆದಿದ್ದು, ಅದರ ಬಳಿಕ ಜನಸಂಖ್ಯೆಯ ನಿಖರ ಮಾಹಿತಿಯನ್ನು ಸಂಗ್ರಹಿಸುವುದು ಸರ್ಕಾರದ ಯೋಜನೆಗಳ ಜಾರಿಗೆ ಪ್ರಮುಖವಾಗಿದೆ ಎಂದು ತಿಳಿಸಿದರು.