ಚಾರ್ಟ್ಡ್ ಅಕೌಂಟೆನ್ಸಿ ದೇಶದಲ್ಲೇ ಅತ್ಯಂತ ಗೌರವಾನ್ವಿತ ಹಾಗೂ ಸವಾಲಿನ ವೃತ್ತಿಪರ ಕೋರ್ಸ್ಗಳಲ್ಲಿ ಒಂದಾಗಿದೆ. ಹಣಕಾಸು ನಿರ್ವಹಣೆ, ಲೆಕ್ಕಪತ್ರ, ತೆರಿಗೆ ಹಾಗೂ ಲೆಕ್ಕಪರಿಶೋಧನೆ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ ಸಿಎಗಳಿಗೆ ದೇಶ-ವಿದೇಶಗಳಲ್ಲಿ ಅಪಾರ ಉದ್ಯೋಗಾವಕಾಶಗಳಿವೆ. ಸಿಎ ಆಗಬೇಕೆಂದರೆ ಕೇವಲ ಬುದ್ಧಿವಂತಿಕೆ ಸಾಕಾಗುವುದಿಲ್ಲ. ಶಿಸ್ತು, ನಿರಂತರ ಅಧ್ಯಯನ, ಸಮಯ ನಿರ್ವಹಣೆ ಹಾಗೂ ದೃಢ ಸಂಕಲ್ಪ ಅತ್ಯಗತ್ಯ. ವಿದ್ಯಾರ್ಥಿಗಳು ಪ್ರಾರಂಭದಿಂದಲೇ ಗಟ್ಟಿಯಾದ ಅಡಿಪಾಯವನ್ನು ನಿರ್ಮಿಸಿಕೊಂಡು ಪ್ರತಿದಿನ ನಿಯಮಿತವಾಗಿ ಅಭ್ಯಾಸ ಮಾಡಬೇಕು ಎಂದು ವಿದ್ಯಾನಿಧಿ ಕಾಲೇಜಿನ ವಾಣಿಜ್ಯ ವಿಭಾಗದ ಶೈಕ್ಷಣಿಕ ಸಂಯೋಜಕ ಜೆ.ಪಿ. ಸುಧಾಕರ್ ಹೇಳಿದರು.