ಶಿರಾ: ತಾಯಿಗೆ ಹೊಡೆದ ಎಂಬ ಕಾರಣಕ್ಕೆ ಮಲತಂದೆಯನ್ನು ಮಗನೇ ಭೀಕರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಮಾರನಗೆರೆಯಲ್ಲಿ ನಡೆದಿದೆ.
ನಿತಿನ್ ತುಳಸಿರಾಮ(40) ಕೊಲೆಗೀಡಾದ ವ್ಯಕ್ತಿ. ಮೂಲತಃ ಮಹಾರಾಷ್ಟ್ರದ ರಾಯಗಡದ ನಿತಿನ್ ಇದ್ದಿಲು ಕೆಲಸ ಮಾಡುತ್ತಿದ್ದು ಆತನ ಮಲಮಗ ಹರೀಶ್ (20)ನಿಂದಲೇ ಹತ್ಯೇಗಿಡಾಗಿದ್ದಾನೆ.
ಮಂಗಳವಾರ ರಾತ್ರಿ ರೇಷನ್ ವಿಚಾರವಾಗಿ ನಿತಿನ್&ಯಶೋದಾ ನಡುವೆ ಜಗಳವಾಗಿದ್ದು ಈ ವೇಳೆ ಮಧ್ಯಪ್ರವೇಶಿಸಿದ ಹರೀಶ್ ಹಲ್ಲೆ ನಡೆಸಿದ್ದಾನೆ. ಈ ಗಲಾಟೆಯಲ್ಲಿ ಯಶೋದಾಗೆ ನಿತಿನ್ ಹೊಡೆದ ಎಂಬ ಕಾರಣಕ್ಕೆ ಕುಪಿತಗೊಂಡ ಹರೀಶ್ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಶವದ ಮುಂದೆ ಕುಳಿತಿದ್ದ ಹರೀಶ್ನನ್ನು ತಾವರೆಕರೆ ಪೊಲೀಸರು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಎರಡನೇ ವಿವಾಹ: 10 ವರ್ಷದ ಹಿಂದೆ ಪತಿಯನ್ನು ಕಳೆದಕೊಂಡಿದ್ದ ಯಶೋದಾ ಮೂರುವರ್ಷದ ಹಿಂದೆ ಇದ್ದಿಲು ಕೆಲಸಕ್ಕೆ ಬಂದಿದ್ದ ನಿತಿನ್ನನ್ನು ಮದುವೆಯಾಗಿದ್ದರು. ಯಶೋದ ಮೊದಲ ಗಂಡನ ಮಕ್ಕಳಾದ ಹರೀಶ್, ವಸಂತ್ಗೆ ತಾಯಿ ಎರಡನೇ ಮದುವೆ ಆಗಿದ್ದು ಇಷ್ಟವಿರಲಿಲ್ಲ.