ಜು.8 ರಂದು ಮಧುಗಿರಿ ತಾಲೂಕಿನ ಪೆಮ್ಮಯ್ಯನಪಾಳ್ಯದ ಲೋಕೇಶ್ ಎಂಬುವರ ಜಮೀನಿನಲ್ಲಿ ಬೋರೆವೆಲ್ಗೆ ಅಳವಡಿಸಿದ್ದ ಸ್ಟಾರ್ಟರ್ ಜತೆ ರೋಟೇಟಿಂಗ್ ಸೈರನ್ ಸಿಸಿ ಕ್ಯಾಮೆರಾ ಕೂಡ ಕಳವು ಮಾಡಲಾಗಿತ್ತು. ಕದ್ದ ಸ್ಟಾರ್ಟರ್ಗಳಲ್ಲಿ ತನ್ನ ಫೇಸ್ ಬುಕ್ ಪೇಜ್ನಲ್ಲಿ ಕಡಿಮೆ ದರ ನಮೂದಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್ನಲ್ಲಿನ ಸಿಸಿ ಕ್ಯಾಮೆರಾ ಕ್ಲೌಡ್ ಫುಟೇಜ್ಆಧರಿಸಿ ಸಿಪಿಐ ಎಚ್.ಜಿ.ಹನುಮಂತರಾಯಪ್ಪ ನೇತೃತ್ವದ ವಿಶೆಷ ತಂಡವು ಈ ಪ್ರಕರಣದ ಆರೋಪಿ ಮಹೇಶ್ ನನ್ನು ಬಂಧಿಸಿ, 66 ವಿವಿಧ ಕಂಪನಿಯ 9.50 ಲಕ್ಷ ರೂ., ಮೌಲ್ಯದ ಸ್ಟಾರ್ಟರ್ ಗಳು, 25 ಸಾವಿರ ಮೊತ್ತದ ಸಿಸಿ ಕ್ಯಾಮೆರಾ, ಕೃತ್ಯಕ್ಕೆ ಬಳಸಿದ ಒಮಿನಿ ವ್ಯಾನ್, ಬೈಕ್ ವಶಪಡಿಸಿಕೊಂಡಿದ್ದಾರೆ. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.