ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಮನೆಗೆ ಪಕ್ಷದ ರಾಷ್ಟ್ರೀಯ ಸಂಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ನೀಡಿ ಸ್ಥೈರ್ಯ ತುಂಬಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸ್ಥೈರ್ಯ ತುಂಬಿದ ಸಂತೋಷ್
ಕೇಡರ್ ಬೇಸ್ಡ್ ಪಾರ್ಟಿ ನಿರೂಪಣೆ
ಹಿಂದೂ ಸಮಾಜೋತ್ಸವದಲ್ಲಿ ಭಾಗಿ
ತುಮಕೂರು: ಬಿಜೆಪಿ ಸಾಮಾನ್ಯ ಕಾರ್ಯಕರ್ತೆ ಮನೆಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ನೀಡಿ ತಮ್ಮದು ಕೇಡರ್ ಬೇಸ್ಡ ಪಾರ್ಟಿ ಎಂಬುದನ್ನು ನಿರೂಪಿಸಿದರು.
ಪಕ್ಷದ ಸೋಷಿಯಲ್ ಮೀಡಿಯಾ ಸಮಿತಿ ಸದಸ್ಯರಾಗಿದ್ದ ಶಕುಂತಲಾ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲ ಒಂದು ವಿವಾದಾತ್ಮಕ ಪೋಸ್ಟರ್ಗಳನ್ನು ಹಾಕಿ ಹಲವು ಬಾರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು ಸೋಮವಾರ ಬಿ.ಎಲ್.ಸಂತೋಷ್ ಅವರ ಮನೆಗೆ ತೆರಳಿ ಪಕ್ಷದ ಸಣ್ಣ ಕಾರ್ಯಕರ್ತೆಗೆ ಸ್ಥೈರ್ಯ ತುಂಬಿದರು.