ಪಕ್ಷಾತೀತವಾಗಿರಲಿವೆ ಭಾರತ್​ ಜೋಡೋ ಸಂಘಗಳು

ಡಿಸಿಎಂ ಡಾ.ಜಿ.ಪರಮೇಶ್ವರ
ಡಿಸಿಎಂ ಡಾ.ಜಿ.ಪರಮೇಶ್ವರ
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಎಂ ಡಾ.ಜಿ.ಪರಮೇಶ್ವರ
  • ಯುವಸಬಲೀಕರಣ, ಕ್ರೀಡಾ ಇಲಾಖೆ ಜವಾಬ್ದಾರಿ
  • ಸರ್ಕಾರದ ಪ್ರಮುಖ ಯೋಜನೆ

ತುಮಕೂರು: ಪಕ್ಷಾತೀತ, ಜಾತಿ, ಧರ್ಮ ಮೀರಿ ಈ ಯುವ ಸಂಘಟನೆಗಳು ಸಾಂಸತಿಕ ಹಾಗೂ ನಮ್ಮ ಪರಂಪರೆ ಹಿನ್ನೆಲೆಯಲ್ಲಿ ಭಾರತ್​ ಜೋಡೋ ಸಂಘಗಳ ಕಾರ್ಯಚಟುವಟಿಕೆ ಇರಲಿವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ 80ನೇ ಸ್ವಾತಂತ್ರೊ$್ಯತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್​ ಜೋಡೋ ಸಂಘ ಸ್ಥಾಪನೆ ನೋಂದಣಿಗೆ ಚಾಲನೆ ನೀಡಲಾಗಿದೆ. ಸರ್ಕಾರದ ಪ್ರಮುಖ ಯೋಜನೆ ಇದಾಗಿದ್ದು ನಮ್ಮ ಯುವಸಬಲೀಕರಣ, ಕ್ರೀಡಾ ಇಲಾಖೆಗೆ ಈ ಜವಾಬ್ದಾರಿ ವಹಿಸಲಾಗಿದೆ. ಈಗಾಗಲೇ 50 ಸಾವಿರ ನೋಂದಣಿ ಆಗಿವೆ. ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದರು.
ಮೆಟ್ರೋ ರೈಲು ಯೋಜನೆಗೆ ಭೂಸ್ವಾಧಿನ ಬದಲು ರಾಷ್ಟ್ರೀಯ ಹೆದ್ದಾರಿ ವಿಭಜಕದಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಕೈಗೆತ್ತಿಕೊಳ್ಳಲಿದ್ದು ಅವರಿಗೆ ಟೌನ್​ಶಿಪ್​ಗಳನ್ನು ನಿರ್ಮಿಸಿಕೊಳ್ಳಲು ಮೆಟ್ರೋ ನಿಲ್ದಾಣಗಳಲ್ಲಿ ಸರ್ಕಾರವೇ ಜಾಗ ಒದಗಿಸಲಿದೆ.
ಡಾ.ಜಿ.ಪರಮೇಶ್ವರ
ಡಿಸಿಎಂ

ಮುಂದುವರೆಯಲಿರುವ ಗ್ಯಾರಂಟಿ ಯೋಜನೆಗಳು

ಪಂಚಗ್ಯಾರಂಟಿ ಯೋಜನೆಗಳು ಜನರ ವಿಶ್ವಾಸ, ಪ್ರೀತಿಗಳಿವೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು ಗ್ಯಾರಂಟಿಗಳನ್ನು ಬೇರೆ ರಾಜ್ಯಗಳು ಅನುಕರಿಸುತ್ತಿವೆ. ಈ ಸಬ್ಸಿಡಿ ಯೋಜನೆಗಳನ್ನು ವಿಶ್ವಬ್ಯಾಂಕ್​ ಕೂಡ ಪ್ರಶಂಸಿಸಿದ್ದು ಈ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಪರಮೇಶ್ವರ್​ ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net