ಚಿ.ನಾ.ಹಳ್ಳಿಯಲ್ಲಿ ಬೆಸ್ಕಾಂ ಕಚೇರಿ ಕಾರ್ಯಾರಂಭ

BESCOM office inaugurated in Chi.na.halli
BESCOM office inaugurated in Chi.na.halli
Published on
ಚಿಕ್ಕನಾಯಕನಹಳ್ಳಿ: ನಾಗರಿಕರ ಸೇವೆಗೆ ಹಾಗೂ ಬೆಸ್ಕಾಂ ಇಲಾಖೆಯ ಕಾರ್ಯಗಳಿಗೆ ಅನುಕೂಲವಾಗಲೆಂದು 3.5 ಕೋಟಿ ರೂ. ವೆಚ್ಚದಲ್ಲಿ ಉತ್ತಮವಾದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ಪಟ್ಟಣದಲ್ಲಿ ನಿರ್ಮಿಸಿರುವ ಬೆಸ್ಕಾಂ ಕಚೇರಿ ಕಾರ್ಯಾರಂಭದ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಳೆಯ ಕಟ್ಟಡ ಚಿಕ್ಕದಾಗಿತ್ತು. ಅದ್ದರಿಂದ ಸುಸಜ್ಜಿತವಾದ ಅತ್ಯಾಧುನಿಕ ತಂತ್ರಜ್ನಾನದೊಂದಿಗೆ ವಿಶಾಲವಾದ ಕಡ್ಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ತಾಲೂಕಿನ ಜನರಿಗೆ ಉತ್ತಮ ಸೇವೆ ನೀಡಿ ಅದರೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ, ಕರ್ತವ್ಯ ನಿರ್ವಹಿಸಿ ಎಂದರು. ನೂತನ ಕಚೇರಿಯ ಕಾರ್ಯಾರಂಭಕ್ಕೆ ಜೆ.ಸಿ.ಮಾಧುಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net