ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿದ ಒರಿಯನ್ಸ್ ಆಟಗಾರರು ಮೊದಲಾರ್ಧಕ್ಕೆ 39-30ಕ್ಕೆ ಮುನ್ನಡೆ ಕಂಡುಕೊಂಡಿತು. ದ್ವಿತೀಯಾರ್ಧದಲ್ಲಿಬ್ಯಾಂಕ್ ಆಫ್ ಬರೋಡಾ ತೀವ್ರ ಪ್ರತಿರೋಧ ಒಡ್ಡಿತಾದರೂ ವಿರೋಚಿತ ಸೋಲು ಅನುಭವಿಸಿತು.ಯಂಗ್ ಒರಿಯನ್ಸ್ ಪರ ಮಿಂಚಿದ ಅಭಿಷೇಕ್(24), ಗೌತಮ್ (16) ಗೆಲುವಿನ ರೂವಾರಿಯಾದರು. ಬರೋಡಾ ಪರ ಕಾರ್ತಿಕೇಯನ್(18), ಹರೀಶ್ (14) ಅಂಕಗಳಿಸಿ ಗಮನ ಸೆಳೆದರು.