ಪ್ರಮುಖ ಮುಖ್ಯಾಂಶಗಳು.ಕರ್ನಾಟಕ ಕ್ರೀಡಾಕೂಟ-2026 ಯಂಗ್ ಒರಿಯನ್ಸ್ ಮತ್ತು ಬ್ಯಾಂಕ್ ಆಫ್ ಬರೊಡ ಸೆಣಸಾಟಬುಧವಾರ ಫೈನಲ್ ಪಂದ್ಯದಲ್ಲಿ ಕಾದಾಟ.ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಪುರುಷರ ಬ್ಯಾಸ್ಕೆಟ್‌ಬಾಲ್ ನಲ್ಲಿ ಯಂಗ್.ಒರಿಯನ್ಸ್ ಮತ್ತು ಬ್ಯಾಂಕ್ ಆಫ್ ಬರೊಡ ತಂಡಗಳು ಪೈನಲ್ ಪ್ರವೇಶಿಸಿವೆ..ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮೈದಾನದಲ್ಲಿ ನಡೆದ ಪುರುಷರ ಮೊದಲ ಸೆಮಿಫೈನಲ್ ನಲ್ಲಿ ಯಂಗ್ ಒರಿಯನ್ಸ್ ತಂಡ 95-82 ಅಂಕಗಳಿಂದ ಜಿಎಸ್ ಟಿ ಕಸ್ಟಮ್ಸ್ ವಿರುದ್ದ ಜಯ ಸಾಧಿಸಿತು..2ನೇ ಸೆಮಿಫೈನಲ್ ನಲ್ಲಿ ಬ್ಯಾಂಕ್ ಆಫ್ ಬರೋಡ ತಂಡ 59-41 ಅಂಕಗಳಿಂದ ಡಿವೈಇಎಸ್ ಬೆಂಗಳೂರು ತಂಡವನ್ನ ಮಣಿಸಿತು..ಮಹಿಳೆಯರ ಮೊದಲ ಸೆಮಿಫೈನಲ್ ನಲ್ಲಿ ಮೈಸೂರು ಡಿವೈಇಎಸ್ ತಂಡ 44-26 ಅಂಕಗಳಿಂದ ಜಯನಗರ ಸ್ಪೋರ್ಟ್ಸ್ ಕ್ಲಬ್ ವಿರುದ್ದ ಜಯ ದಾಖಲಿತು..ಎರಡನೇ ಸೆಮಿಫೈನಲ್ಲಿ ವಿದ್ಯಾ ನಗರ ಡಿವೈಇಎಸ್ ತಂಡ 42-35 ರಿಂದ ಮಂಡ್ಯವನ್ನ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.