ಮಹಾತ್ಮರ ಜಂಟಿ ಉತ್ಸವ: ಹೂವಿನ ಅಲಂಕೃತ ಮಂಟಪದಲ್ಲಿ ಮೂವರು ಮಹಾತ್ಮರ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಎಸ್ಐಟಿ ಆವರಣದಿಂದ ಆರಂಭವಾಗಲಿರುವ ಉತ್ಸವ ಗಂಗೋತ್ರಿ ರಸ್ತೆ, ಎಸ್ಐಟಿ, ಎಸ್ಎಸ್ ಪುರಂ ರಸ್ತೆ, ಡಾ. ರಾಧಾಕೃಷ್ಣ ರಸ್ತೆ, ಜಗದ್ಗುರು ರೇಣುಕಾಚಾರ್ಯ ವೃತ್ತ, ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಸ್ವಾತಂತ್ರ ಚೌಕ, ಮಂಡಿಪೇಟೆ ಮೂಲಕ ಸಾಗಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಪನ್ನಗೊಳ್ಳಲಿದೆ.