ಬೆಂಗಳೂರು-ಅರಸೀಕೆರೆ ಪ್ಯಾಸೆಂಜರ್​ ರೈಲಿಗೆ ಹೆಚ್ಚುವರಿ ಬೋಗಿ

ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ನಿಯೋಗವು  ಮೈಸೂರು ವಲಯದ ಎಡಿಆರ್​ಎಂ ಶಮ್ಮಾಸ್​ ಹಮೀದ್​ರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ  ಮನವಿ ಸಲ್ಲಿಸಿತು. ಕರಣಂ ರಮೇಶ್​, ಸಿ.ನಾಗರಾಜ್​, ಎಂ.ಆರ್​.ರು, ಅರ್ಷದ್​ ಇದ್ದರು.
ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ನಿಯೋಗವು ಮೈಸೂರು ವಲಯದ ಎಡಿಆರ್​ಎಂ ಶಮ್ಮಾಸ್​ ಹಮೀದ್​ರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿತು. ಕರಣಂ ರಮೇಶ್​, ಸಿ.ನಾಗರಾಜ್​, ಎಂ.ಆರ್​.ರು, ಅರ್ಷದ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ನಿಯೋಗ
  • ಮೈಸೂರು ವಲಯದ ಎಡಿಆರ್​ಎಂ ಶಮ್ಮಾಸ್​ ಹಮೀದ್​ ಭರವಸೆ
  • ತುಮಕೂರು-ಹಾಸನ ಮೆಮು ರೈಲು ಪರಿಶೀಲನೆ
ತುಮಕೂರು: ಅರಸೀಕೆರೆಯಿಂದ ಬೆಂಗಳೂರಿಗೆ ತೆರಳುವ ಅರಸೀಕೆರೆ ಪ್ಯಾಸೆಂಜರ್​ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇನ್ನೊಂದು ವಾರದಲ್ಲಿ ಕನಿಷ್ಟ 18 ಬೋಗಿಗಳನ್ನು ಜೋಡಿಸಲಾಗುವುದು ಎಂದು ಮೈಸೂರು ವಲಯದ ಎಡಿಆರ್​ಎಂ ಶಮ್ಮಾಸ್​ ಹಮೀದ್​ ಭರವಸೆಯಿತ್ತರು.
ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ನಿಯೋಗವು ಬುಧವಾರ ಭೇಟಿ ಮಾಡಿದ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನಿಟ್ಟಿದ್ದು ಅರಸೀಕೆರೆ ರೈಲಿಗೆ ಬೋಗಿಗಳನ್ನು ಅನಿವಾರ್ಯವಾಗಿ ಕಡಿಮೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದರ ನಿವಾರಣೆಗೆ ಇನ್ನೊಂದು ವಾರದಲ್ಲಿ ಹೆಚ್ಚು ಬೋಗಿಗಳನ್ನು ಅಳವಡಿಸಲಾಗುವುದು. ಸಂಜೆ ವೇಳೆ ಅರಸೀಕೆರೆಯಿಂದ ಹೊರಡುವಂತೆ ಬೆಂಗಳೂರಿಗೆ ಪ್ಯಾಸೆಂಜರ್​/ಮೆಮು ರೈಲು ಆರಂಭಿಸಲು ಮೆಮು ರೇಕುಗಳಿಗೆ ರೈಲ್ವೇ ಮಂಡಳಿಗೆ ಮನವಿ ಸಲ್ಲಿಸಲಾಗಿದ್ದು, ರೇಕುಗಳು ಬಂದ ನಂತರ ಈ ಮನವಿ ಪುರಸ್ಕರಿಸುವುದಾಗಿ ತಿಳಿಸಿದರು.
ಬೆಳಗ್ಗೆ 8.45ರ ತುಮಕೂರು-ಯಶವಂತಪುರ ಮೆಮು ರೈಲಿಗೆ ಸಂಪರ್ಕ ಕಲ್ಪಿಸುವಂತೆ ಶಿವಮೊಗ್ಗ ತುಮಕೂರು ರೈಲಿನ ವೇಳೆಯಲ್ಲಿ ಅಲ್ಪ ಬದಲಾವಣೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು. ಇದೇ ರೈಲನ್ನು ತುಮಕೂರು-ಅರಸೀಕೆರೆ ಮಧ್ಯೆ ಹೆಚ್ಚುವರಿಯಾಗಿ ಓಡಿಸುವ ಕಾರ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು. ತುಮಕೂರು-ಹಾಸನ ನಡುವೆ ಮೆಮು ರೈಲು ಸಂಚಾರಕ್ಕೆ ಅವಕಾಶವಿದ್ದು, ಬೆಂಗಳೂರು ವಿಭಾಗದವರು ಮೆಮು ಸಂಚಾರಕ್ಕೆ ವ್ಯವಸ್ಥೆ ಮಾಡುವುದಾದಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.
ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳಾದ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕೇಂದ್ರವಾಗಿರುವ ಬಾಣಸಂದ್ರದಲ್ಲಿ ಶಿವಮೊಗ್ಗ ಇಂಟರ್​ಸಿಟಿ, ಹೊಸಪೇಟೆ ಇಂಟರ್​ಸಿಟಿ ಮತ್ತು ವಿಶ್ವಮಾನವ ಎಕ್ಸ್​ಪ್ರೆಸ್​ ರೈಲಿಗೆ ನಿಲುಗಡೆ ನೀಡಬೇಕೆಂಬ ಮನವಿಗೆ ಯಾವುದಾದರೂ ಒಂದು ರೈಲಿಗೆ ನಿಲುಗಡೆಗೆ ಅವಕಾಶ ಕೋರಿ ಮಂಡಳಿಗೆ ಮನವಿ ಕಳುಹಿಸಲಾಗುವುದು ಎಂದು ಡಿಒಎಂ ಯು.ಪಿ.ತೇಜಸ್​ ಭರವಸೆನೀಡಿದರು.
ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್​ ನೇತೃತ್ವದ ನಿಯೋಗದಲ್ಲಿ ಕಾರ್ಯದರ್ಶಿ ಸಿ. ನಾಗರಾಜ್​, ನಿರ್ದೇಶಕರಾದ ಎಂ.ಆರ್​.ರಘು, ಅರ್ಷದ್​ ಇದ್ದರು. ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಲೋಹಿತ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net