ಪುರುಷರ 200 ಮೀಟರ್ ನಲ್ಲಿ ಉಡುಪಿಯ ಅಂಕಿತ್ ಜೋಗಿ 21.5 ಸೆಕೆಂಡ್ ನಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಮಾರ್ಕ್ ಡಿಕೋಸ್ಟಾ ಮತ್ತು ಆಯುಷ್ ಆರ್. ದೇವಾಡಿಗ ಬೆಳ್ಳಿ, ಕಂಚಿನ ಪದಕ ಪಡೆದರು. ಮಹಿಳೆಯರ 200 ಮೀಟರ್ ನಲ್ಲಿ ದಕ್ಷಿಣ ಕನ್ನಡದ ಶ್ರಾವಣಿ ಭಾಟೆ 24.6 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಬಂಗಾರಕ್ಕೆ ಕೊರಳೊಡ್ಡಿದರು. ವೈಭವಿ ಮತ್ತು ರೀತುಶ್ರೀ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗೆದ್ದು ಬೀಗಿದೆ.