ಅಮೆಜಾನ್​ ವೆಬ್​ ಸರ್ವೀಸಸ್​ ಜತೆ ವಿದ್ಯಾವಾಹಿನಿ ಒಡಂಬಡಿಕೆ

ತುಮಕೂರಿನ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು ಹಾಗೂ  ಅಮೆಜಾನ್​ ವೆಬ್​ ಸರ್ವೀಸಸ್​ (ಎಡಬ್ಲೂಎಸ್​)  ಅಕಾಡೆಮಿಯೊಂದಿಗೆ ಅಧಿಕೃತ ಒಡಂಬಡಿಕೆ ಪತ್ರವನ್ನು ಎನ್​.ಬಿ.ಪ್ರದಿಪ್​ ಕುಮಾರ್​ ವಿನಿಮಯ ಮಾಡಿಕೊಂಡರು. ಡಿ.ವಿಷ್ಣುಪ್ರಸಾದ್​, ಡಾ.ಎ.ಅರುಣಾ, ಪ್ರಸನ್ನಕುಮಾರ್​, ಜಾಹ್ನವಿ, ಜಕಾಉಲ್ಲಾ ಇದ್ದರು.
ತುಮಕೂರಿನ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು ಹಾಗೂ ಅಮೆಜಾನ್​ ವೆಬ್​ ಸರ್ವೀಸಸ್​ (ಎಡಬ್ಲೂಎಸ್​) ಅಕಾಡೆಮಿಯೊಂದಿಗೆ ಅಧಿಕೃತ ಒಡಂಬಡಿಕೆ ಪತ್ರವನ್ನು ಎನ್​.ಬಿ.ಪ್ರದಿಪ್​ ಕುಮಾರ್​ ವಿನಿಮಯ ಮಾಡಿಕೊಂಡರು. ಡಿ.ವಿಷ್ಣುಪ್ರಸಾದ್​, ಡಾ.ಎ.ಅರುಣಾ, ಪ್ರಸನ್ನಕುಮಾರ್​, ಜಾಹ್ನವಿ, ಜಕಾಉಲ್ಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು
  • 125 ಬಿಸಿಎ ವಿದ್ಯಾರ್ಥಿಗಳಿಗೆ ಕ್ಲೌಡ್​ ಪ್ರಾಕ್ಟಿಷನರ್​ ಪ್ರಮಾಣಪತ್ರ
  • ಉದ್ಯೋಗ ಹಾದಿ ಸುಗಮ
ತುಮಕೂರು: ಇಂದಿನ ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್​ ತಂತ್ರಜ್ಞಾನದ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟಕ್ಕೆ ಸಜ್ಜುಗೊಳಿಸುತ್ತಿರುವ ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು, ತಾಂತ್ರಿಕ ಶಿಕ್ಷಣಕ್ಷೇತ್ರದಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿದೆ.
ಜಾಗತಿಕ ಐಟಿ ದೈತ್ಯ ಸಂಸ್ಥೆಯಾದ ಅಮೆಜಾನ್​ ವೆಬ್​ ಸರ್ವೀಸಸ್​ (ಎಡಬ್ಲೂಎಸ್​) ಅಕಾಡೆಮಿಯೊಂದಿಗೆ ಕಾಲೇಜು ಅಧಿಕೃತ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ಕಾಲೇಜಿನಲ್ಲಿ ಎಡಬ್ಲೂಎಸ್​ ಮತ್ತು ಐಬಿಎಂ ಸ್ಕಿಲ್ಸ್​ ಬಿಲ್ಡ್​ ಇನ್ಸಿಟಿಟ್ಯೂಷನಲ್​ ಮೆಂಬರ್​ ಶಿಪ್​ ಸ್ಥಾಪಿಸಲಾಗಿದೆ.
ಐಸಿಟಿ ಅಕಾಡೆಮಿ ಪ್ರೋತ್ಸಾಹ: ದೇಶದ ಮುಂಚೂಣಿ ಕೌಶಲಾಭಿವೃದ್ಧಿ ಸಂಸ್ಥೆಯಾದ ಐಸಿಟಿ ಅಕಾಡೆಮಿ ಈ ಐತಿಹಾಸಿಕ ತಾಂತ್ರಿಕ ಉಪಕ್ರಮಕ್ಕೆ ಬೆಂಬಲ ಹಾಗು ಪ್ರೋತ್ಸಾಹ ನೀಡಿದೆ. ಇದರ ನೇರ ಫಲವಾಗಿ ಕಾಲೇಜಿನ 125 ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಕಠಿಣವಾದ ಎಡಬ್ಲೂಎಸ್​ ಅಕಾಡೆಮಿಯ ಕ್ಲೌಡ್​ ಪ್ರಾಕ್ಟಿಷನರ್​ ಸರ್ಟಿಫಿಕೇಶನ್​ ಪರೀಕ್ಷಯನ್ನು ಯಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.
ಉದ್ಯೋಗದ ಹಾದಿ ಸುಗಮ: ಇಂದಿನ ತಾಂತ್ರಿಕ ಯುಗದಲ್ಲಿ ಕೇವಲ ಪದವಿ ಶಿಕ್ಷಣ ಸಾಲುವುದಿಲ್ಲ. ವಿದ್ಯಾರ್ಥಿಗಳಿಗೆ ನೇರವಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಸಿಗುವಂತಾಗಲು ಉದ್ಯಮ ಆಧಾರಿತ ಕಲಿಕೆ ಅತ್ಯಗತ್ಯ. ಇದಕ್ಕಾಗಿಯೇ ನಾಮ ಐಸಿಟಿ ಅಕಾಡೆಮಿಯ ಸಹಯೋಗದೊಂದಿಗೆ ಜಾಗತಿಕ ಸಂಸ್ಥೆಯಾದ ಐಡಬ್ಲೂಎಸ್​ ಅಕಾಡೆಮಿ ಮತ್ತು ಐಬಿಎಂ ಸ್ಕಿಲ್ಸ್​ ಬಿಲ್ಡ್​ ಜತೆ ಕೃಜೋಡಿಸಿದ್ದೇವೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್​.ಬಿ.ಪ್ರದಿಪ್​ ಕುಮಾರ್​ ಹೇಳಿದರು.
ಜಾಗತಿಕ ಐಟಿ ಮಾರುಕಟ್ಟೆಯಲ್ಲಿ ಕ್ಲೌಡ್​ ಕಂಪ್ಯೂಟಿಂಗ್​ ತಂತ್ರಜ್ಞಾನಕ್ಕೆ ಅಪಾರ ಬೇಡಿಕೆಯಿದೆ. ವಿದ್ಯಾವಾಹಿನಿ ಕಾಲೇಜು ಐಡಬ್ಲೂಎಸ್​ ಅಕಾಡೆಮಿ ಮತ್ತು ಐಬಿಎಂ ಸ್ಕಿಲ್ಸ್​ ಬಿಲ್ಡ್​ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಇನ್ಸಿಟಿಟ್ಯೂಷನಲ್​ ಮೆಂಬರ್ಶಿಪ್​ ಪಡೆದಿದೆ. ಇದು ವಿದ್ಯಾರ್ಥಿಗಳ ಉದ್ಯೋಗ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಲಿದೆ ಎಂದು ಐಸಿಟಿ ಅಕಾಡೆಮಿ ಡೆಪ್ಯುಟಿ ಜನರಲ್​ ಮ್ಯಾನೇಜರ್​ ಡಿ.ವಿಷ್ಣುಪ್ರಸಾದ್​ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅರುಣಾ, ವಿದ್ಯಾವಾಹಿನಿ ಗ್ರೂಪ್​ನ ಸಿಡಿಸಿ ಮುಖ್ಯಸ್ಥ ಪ್ರಸನ್ನಕುಮಾರ್​, ಜಕಾಉಲ್ಲಾ, ಬಿಸಿಎ ವಿಭಾಗದ ಮುಖ್ಯಸ್ಥೆ ಜಾಹ್ನವಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net