ಬಿಎಸ್​ಎನ್​ಎಲ್​ ಕಚೇರಿ ಮುತ್ತಿಗೆ ಯತ್ನ

ಜಂಟಿ ಸಮಿತಿ ಮತ್ತು  ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ತುಮಕೂರಿನಲ್ಲಿ ಬಿಎಸ್​ಎನ್​ಎಲ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ತುಮಕೂರಿನಲ್ಲಿ ಬಿಎಸ್​ಎನ್​ಎಲ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನಕಾರ ಬಂಧನ ಬಿಡುಗಡೆ
  • ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟನೆ
  • ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ
ತುಮಕೂರು: ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ಜಾರಿ ವಿರೋಧಿಸಿ, ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಪುನರ್​ ಸ್ಥಾಪಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಸೇವೆಗಳನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ನಗರದ ಬಿಎಸ್​ಎನ್​ಎಲ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು, ಕಾರ್ಮಿಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು.
ಅಂತರಸನ ಹಳ್ಳಿ, ಸತ್ಯಮಂಗಲ, ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಲಸಕ್ಕೆ ಹಾಜರಾಗದ ಸಾವಿರಾರು ಕಾರ್ಮಿಕರು ಮುಷ್ಕರದಲ್ಲಿ ಬಾಗಿಯಾದರು. ಅಂಗನವಾಡಿ, ಬಿಸಿಯೂಟ. ಅಶಾ, ಮುನಿಸಿಪಲ್​ , ಅಸ್ವತ್ರೆ, ಹಮಾಲಿ ಕಾರ್ಮಿಕರು. ಫುಟ್​ಪಾತ್​ ವ್ಯಾಪಾರಿಗಳು. ಬ್ಯಾಂಕ್​ ನೌಕರರು. ವಿಮಾ ನೌಕರರು. ಮುಷ್ಕರದಲ್ಲಿ ಭಾಗಿಯಾಗಿದ್ದರು.
ಗುರುವಾರ ಟೌನ್​ಹಾಲ್​ ಮುಂಭಾಗ ಸಮಾವೇಶಗೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಪ್ರತಿಭಟನಾನಿರತರು ಬಿಎಸ್​ಎನ್​ಎಲ್​ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 12 ಗಂಟೆಯ ದುಡಿಮೆ ಕಾನೂನು ಹಿಂಪಡೆಯಿರಿ, ಕನಿಷ್ಟ ವೇತನ ಮಾಸಿಕ 41ಸಾವಿರ ನಿಗಧಿ ಮಾಡಿ, ನಿಗದಿತ ಕಾಲಾವಧಿ ದುಡಿಮೆ ಅವಕಾಶ ನೀಡಿ, ಕಾಯಂ ಕೆಲಸಗಳೆ ಇಲ್ಲದಂತೆ ಮಾಡುವುದನ್ನು ವಿರೋಧಿಸಿ, ವಿದ್ಯುತ್​ ಬಳಕೆದಾರರಿಗೆ ವಿಪರೀತ ಬೆಲೆ ಏರಿಕೆಗೆ ಕಾರಣವಾಗುವ ವಿದ್ಯುತ್​ ಖಾಸಗಿಕರಣಕ್ಕೆ ದಾರಿ ಮಾಡುವ ವಿದ್ಯುತ್​ ಕಾಯಿದೆ ವಿರೋಧಿಸಿ. ರೈತರ ಸ್ವಾವಲಂಬನೆಗೆ ಕುತ್ತು ತರುವ ಬೀಜ ಮಸೂದೆ ವಿರೋಧಿಸಿ , ಬಲವಂತದ ಭೂಸ್ವಾಧಿನ, ಬಗೇರ್​ ಹುಕುಂ ಸಾಗುವಳಿದಾರರ ಪ್ರಶ್ನೆ ಇತ್ಯಾರ್ಥಗೊಳಿಸುವಂತೆ ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮೆರವಣಿಗಗೆ ಚಾಲನೆ ನೀಡಿದರು.
ಜೆಸಿಟಿಯು ಜಿಲ್ಲಾ ಸಂಚಾಲಕ ಕಂಬೇಗೌಡ, ಎಐಯುಟಿಯುಸಿ ಜಿಲ್ಲಾ ಸಂಚಾಲಕಿ ಮಂಜುಳ ಗೋನಾವರ, ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್​ ಮುಜೀಬ್​, ಎಐಟಿಯುಸಿ ಜಿಲ್ಲಾ ಕಾರ್ಯಧ್ಯಕ್ಷ ಗಿರೀಶ್​, ಗೋವಿಂದರಾಜು, ರಂಗನಾಥ್​, ಹೋರಾಟದಲ್ಲಿ ಸಿಐಟಿಯು ಷಣ್ಮಗಪ್ಪ. ಸುಜಿತ್​ ನಾಯಕ್​, ರಂಗಧಾಮಯ್ಯ, ಕರ್ನ ಲಿಬರ್ಸ್​ ಕಾರ್ಮಿಕರ ಸಂಘ ಶಿವಕುಮಾರ್​ ಸ್ವಾಮಿ. ಫೀಟ್​ ವೆಲ್​ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತುರಾಜ್​, ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಗೌರಮ್ಮ. ಗಂಗಮ್ಮ. ಜಬಿನಾ, ಹಮಾಲಿ ಕಾರ್ಮಿಕರ ಸಂಘ ನಾಗರಾಜು. ಗ್ರಾಮ ಪಂಚಾಯತ್​ ನೌಕರರ ಸಂಘ ನಾಗೇಶ, ಯೋಗಿಶ್​. ವಿಶಾಕ ಕಾರ್ಮಿಕ ಸಂಘ ಸ್ಟಾಲಿ ಸುಕುಮಾರ್​ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net