ರಾಗಿ ಮಾರಿದ 9802 ರೈತರಿಗೆ 206ಕೋಟಿ ರೂ. ಬಾಕಿ

ಖರೀದಿ ಕೇಂದ್ರದ ಮುಂದೆ ಚಳಿ, ಗಾಳಿಯೆನ್ನದೆ ದಿನಗಟ್ಟಲೇ ಟ್ರಾಕ್ಟರ್​ಗಳನ್ನು ನಿಲ್ಲಿಸಿಕೊಂಡು ಕಾದು ರಾಗಿ ಮಾರಾಟ ಮಾಡಿದ್ದ ರೈತರು.
ಖರೀದಿ ಕೇಂದ್ರದ ಮುಂದೆ ಚಳಿ, ಗಾಳಿಯೆನ್ನದೆ ದಿನಗಟ್ಟಲೇ ಟ್ರಾಕ್ಟರ್​ಗಳನ್ನು ನಿಲ್ಲಿಸಿಕೊಂಡು ಕಾದು ರಾಗಿ ಮಾರಾಟ ಮಾಡಿದ್ದ ರೈತರು.
Published on

ಪ್ರಮುಖ ಮುಖ್ಯಾಂಶಗಳು

  • ರಾಗಿ ಹಣ ಸಿಗದೆ ಅನ್ನದಾತರ ಪರದಾಟ
  • ಬೆಲೆ ಸ್ಥೀರಿಕರಣ ಆವರ್ತನಿಧಿ ಬಳಸದ ಸರ್ಕಾರ
  • ಸಕಾಲದಲ್ಲಿ ಹಣಸಿಗದ ಜೀವನ ನಿರ್ವಹಣೆಯೂ ಕಷ್ಟ

ತುಮಕೂರು: ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಜಿಲ್ಲೆಯಲ್ಲಿ ರೈತರಿಂದ ಖರೀದಿಸಿದ ರಾಗಿಗೆ ಹಣ ನೀಡಲು ಸರ್ಕಾರ ಸತಾಯಿಸುತ್ತಿರುವುದು ಬರದಿಂದ ತತ್ತರಿಸಿರುವ ರೈತರ ಆತಂಕ ಹೆಚ್ಚಿಸಿದೆ. ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿರುವ 19802 ರೈತರಿಗೆ 206ಕೋಟಿ ರೂ. ಬಾಕಿ ನೀಡಬೇಕಿದ್ದು ಮೂರು ತಿಂಗಳಾದರೂ ರೈತರ ಖಾತೆಗಳಿಗೆ ಹಣ ವರ್ಗಾವಣೆಯಅಗಿಲ್ಲ.

ಬೆಂಬಲ ಬೆಲೆ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥೀರಿಕರಣ ಆವರ್ತನಿಧಿ ಸ್ಥಾಪಿಸಿದ್ದು ಪ್ರಸ್ತುತ 1.255 ಕೋಟಿ ರೂ. ಅನುದಾನ ಲಭ್ಯವಿದೆಯಾದರೂ ರೈತರಿಗೆ ಸಕಾಲದಲ್ಲಿ ಹಣ ನೀಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ ಎಂಬ ಯಕ್ಷಪ್ರಶ್ನೆ ಮೂಡಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಲೆಗಳು ಕುಸಿತಗೊಂಡ ಸಂದರ್ಭಗಳಲ್ಲಿ ರೈತರು ಉತ್ಪನ್ನಗಳನ್ನು ಒತ್ತಡದಿಂದ ಮಾರಾಟ ಮಾಡುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆ ಜಾರಿಯಲ್ಲಿದ್ದು ಮಾರುಕಟ್ಟೆ ಮಧ್ಯೆಪ್ರವೇಶ ಯೋಜನೆ ಪ್ಲೋರ್​ಪೈಸ್​ ಯೋಜನೆ. ಬೆಲೆ ವ್ಯತ್ಯಾಸ ಪಾವತಿ ಯೋಜನೆಗಳ ಅನುಷ್ಟಾನವಾಗಬೇಕಿದೆ.
ಕಳೆದ ಮಾರ್ಚ್​ನಿಂದ ಏ.16ರ ವರೆಗೂ ರಾಗಿ ಮಾರಾಟ ಮಾಡಿದ ರೈತರ ಖಾತೆಗೆ ಮಾತ್ರ ಹಣ ನೀಡಲಾಗಿದೆ, ಏ.17ರಿಂದ ಜೂನ್​ 15ರ ವರೆಗೆ ರಾಗಿ ಮಾರಾಟ ಮಾಡಿರುವ 19802 ರೈತರಿಗೆ 206ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 395 ಕೋಟಿ ರೂ. ಹಣ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಚಿಕ್ಕನಾಯಕನಹಳ್ಳಿ, ಹುಳಿಯಾರು, ಗುಬ್ಬಿ, ಕೊರಟಗೆರೆ, ಕುಣಿಗಲ್​, ಮಧುಗಿರಿ, ಶಿರಾ, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ತಾಲೂಕಿನ 19802 ರೈತರಿಗೆ 206 ಕೋಟಿ ರೂ. ಬಾಕಿಯಿದೆ.
ಜಿಲ್ಲೆಯಲ್ಲಿ ಬಾಕಿ ಇರುವ ರಾಗಿ ಹಣ
ತಾಲೂಕು ರೈತರು ಬಾಕಿ
ಚಿಕ್ಕನಾಯಕನಹಳ್ಳಿ - 7273 78ಕೋಟಿ ರೂ.
ಕುಣಿಗಲ್​ -3744 33
ತಿಪಟೂರು - 3544 34
ತುರುವೇಕೆರೆ 4515 49
ತುಮಕೂರು 189 1.95
ಗುಬ್ಬಿ 470 60 ಲಕ್ಷ ರೂ.
ಕೊರಟಗೆರೆ - 12 10
ಮಧುಗಿರಿ - 23 25
ಶಿರಾ 32 34
ಒಟ್ಟು 19802 206ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net