ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಈಗಿನ ಮಕ್ಕಳು ಮೊಬೈಲ್ ಮಾಯೆಯಲ್ಲೇ ಮುಳುಗಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ, ಕಲೆ, ಬರವಣಿಗೆ ಮತ್ತು ಓದುವ ಸಂಸತಿ ಮಾಯವಾಗಬಹುದೆಂಬ ಆತಂಕ ಉಂಟಾಗಿದೆ. ಆದರೆ, ಯುವಪೀಳಿಗೆ ಓದು, ಬರವಣಿಗೆ, ನಾಟಕ, ಕಾವ್ಯ, ಕಲೆಗಳತ್ತ ಆಸಕ್ತಿ ತೋರಿಸಿ ಸಾಂಸತಿ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಕನ್ನಡದ ವೈಭವ ಉಳಿದು ಮುಂದಿನ ತಲೆಮಾರಿಗೆ ಸಮೃದ್ಧಿಯಾಗಿ ತಲುಪಲಿದೆ ಎಂದರು.