ಸುಶಿಕ್ಷಿತರ ದಿವ್ಯ ಮೌನ ದೇಶದ್ರೋಹವೆನಿಸಲಿದೆ

ತುಮಕೂರಿನಲ್ಲಿ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  "ಸಾಹಿತ್ಯ ಶ್ರೀ ದತ್ತಿ ಪ್ರಶಸ್ತಿಯನ್ನು ಸಾಧಕರಿಗೆ  ಎಸ್​.ಜಿ.ಸಿದ್ದರಾಮಯ್ಯ ಪ್ರದಾನ ಮಾಡಿದರು. ಡಾ.ಕರೀಗೌಡ ಬೀಚನಹಳ್ಳಿ, ಕೆ.ಎಸ್​.ಸಿದ್ದಲಿಂಗಪ್ಪ, ಡಾ.ಡಿ.ಎನ್​.ಯೋಗೀಶ್ವರಪ್ಪ ಮತ್ತಿತರರು ಇದ್ದರು.
ತುಮಕೂರಿನಲ್ಲಿ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ "ಸಾಹಿತ್ಯ ಶ್ರೀ ದತ್ತಿ ಪ್ರಶಸ್ತಿಯನ್ನು ಸಾಧಕರಿಗೆ ಎಸ್​.ಜಿ.ಸಿದ್ದರಾಮಯ್ಯ ಪ್ರದಾನ ಮಾಡಿದರು. ಡಾ.ಕರೀಗೌಡ ಬೀಚನಹಳ್ಳಿ, ಕೆ.ಎಸ್​.ಸಿದ್ದಲಿಂಗಪ್ಪ, ಡಾ.ಡಿ.ಎನ್​.ಯೋಗೀಶ್ವರಪ್ಪ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತ್ಯ ಶ್ರೀ ದತ್ತಿ ಪ್ರಶಸ್ತಿ ಪ್ರದಾನ
  • ಸಾಹಿತಿ ಎಸ್​.ಜಿ.ಸಿದ್ದರಾಮಯ್ಯ
  • 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ತುಮಕೂರು: ಸಾಹಿತಿಗಳು ಪ್ರಶಸ್ತಿಗಳು ಸೇರಿದಂತೆ ಎಲ್ಲಾ ಲಾಭ ಪಡೆದುಕೊಂಡು ಮೌನವಾಗಿರದೆ ಸಾಮಾಜಿಕ ಎಚ್ಚರದಲ್ಲಿರಬೇಕಿದೆ. ಸುಶಿಕ್ಷಿತರ ದಿವ್ಯ ಮೌನ ದೇಶದ್ರೋಹದ ಕೆಲಸವಾಗಲಿದೆ ಎಂದು ಸಾಹಿತಿ ಎಸ್​.ಜಿ.ಸಿದ್ಧರಾಮಯ್ಯ ಹೇಳಿದರು.
ನಗರದ ಗಾಜಿನಮನೆಯಲ್ಲಿ ಆಯೋಜಿಸಿದ್ದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ "ಸಾಹಿತ್ಯ ಶ್ರೀ ದತ್ತಿ ಪ್ರಶಸ್ತಿ ಪ್ರದಾನ' ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಂರಕ್ಷಿಸಲು ಹಾಗೂ ಬೆಳೆಸಲು ಕನ್ನಡದ ಸಾಕ್ಷಿ ಪ್ರಜ್ಞೆಯಂತಿರುವ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಕೂಡ ಅಪಾಯದಲ್ಲಿದೆ ಎಂದರು.
ಕಸಾಪ ಪದಾಧಿಕಾರಿಗಳು ಸಾಂಸತಿಕವಾಗಿ ತೌಡು ಕುಟ್ಟುವುದಲ್ಲ, ಸಮಾಜಕ್ಕೆ ಅಗತ್ಯವಿದ್ದಾಗ ಸಾಮಾಜಿಕ ಪ್ರಜ್ಞೆಯ ಎಚ್ಚರಿಕೆ ನೀಡುವ ಕೆಲಸವಾಗಲಿ. ಕನ್ನಡದ ಸಾ ಪ್ರಜ್ಞೆಯಂತಿರುವ ಸಂಸ್ಥೆಗಳಿಗೆ ಸರ್ಕಾರ ಉತ್ತೇಜನ ನೀಡಲಿ. ಗ್ರಾಮೀಣ ಭಾಗದಲ್ಲಿ ಕಾನ್ವೆಂಟ್​ ಹಾವಳಿಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು, ಕೂಲಿನಾಲಿ ಮಾಡುವ ಬಡಮಕ್ಕಳು ಅಕ್ಷರ ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಗಳು ವಿದ್ಯಾರ್ಥಿಗಳ ಸಂಖ್ಯೆಯ ನೆಪ ಮಾಡಿಕೊಂಡು ಕನ್ನಡ ಶಾಲೆಗಳನ್ನು ಮುಚ್ಚೋದಲ್ಲ, ಸುಳ್ಳು ಹೇಳೋದಲ್ಲ. ನೆಹರು ಆಶಯಕ್ಕೆ ಪೂರಕವಾದ ನಿಮ್ಮ ನಡೆ ಇರಲಿ ಎಂದು ಆ ಬಡಮಕ್ಕಳ ಪರವಾಗಿ ಆಗ್ರಹಿಸುವೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ, ವಿಶೇಷವಾಗಿ ಸಾಹಿತಿಗಳ ಜವಬ್ಧಾರಿ, ಅಧಿಕಾರಕ್ಕಾಗಿ ಹಪಾಹಪಿಸುದಲ್ಲ ಕನ್ನಡ ತನವನ್ನು ಉಳಿಸಬೇಕಿದೆ ಎಂದರು.
ನಮ್ಮ ಶಿಕ್ಷಣ ಇಂತಹ ಅವನತಿಗೆ ಇಳಿಯುತ್ತಿರುವುದನ್ನು ಗಮನಿಸಬೇಕಿದೆ, ಕೇಂದ್ರದವರು ಸುಳ್ಳು ಹೇಳುತ್ತಾರೆ ಎನ್ನುವ ಪರಂಪರೆಯನ್ನು ನೀವು ಮುಂದುವರೆಸುವುದು ಬೇಡ, ಕನ್ನಡಸಾಕ್ಷಿ ಪ್ರಜ್ಞೆ ಯಂತಿರುವ ಸಾಹಿತಿಗಳು ಮೌನವಾಗಿದ್ದರೆ ಪ್ರಾದೇಶಿಕ ಭಾಷೆಗಳಿಗೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿ ಇಡೀ ಪ್ರಜಾಪ್ರಭುತ್ವ ಆತಂಕದಲ್ಲಿದೆ, ಈ ಸಂದರ್ಭದಲ್ಲಿ ನಮ್ಮವರ ದಿವ್ಯ ಮೌನ ದೇಶದ್ರೋಹಿ ಕೃತ್ಯ ಎನ್ನಿಸಿಕೊಳ್ಳಲಿದೆ. ಕಣ್ಣೆದುರೆ ದರೋಡೆ ನಡೆಯುತ್ತಿದೆ,. ಬಡವರಿಗೆ ಅನ್ನು ಕೊಡುವ 2 ಸಾವಿರ ರೂ. ಕೊಡುವುದನ್ನು ಪ್ರಶ್ನಿಸುತ್ತಿರುವ ಕೆಲವರು ದೊಡ್ಡದೊಡ್ಡ ಹಗರಣಗಳ ಬಗ್ಗೆ ತುಟಿಬಿಚ್ಚುವುದಿಲ್ಲ, ಕೇವಲ ಸಾಹಿತ್ಯದ ತೌಡು ಕುಟ್ಟುವುದಲ್ಲ ಸಂಬಂಧಪಟ್ಟ ಆಡಳಿತಕ್ಕೆ ಎಚ್ಚರಿಕೆ ಕೊಡಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ಪ್ರಶಸ್ತಿ ಪುರಸತರಾದ ದ್ವಾರನಕುಂಟೆ ಪಾತಣ್ಣ, ಉಗಮ ಶ್ರೀನಿವಾಸ್​, ಕೆ.ವಿ.ಮುದ್ದವಿರಪ್ಪ, ವಿದ್ಯಾ ಅರಮನೆ, ಜಲಜ ಜೈನ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net