ದೇವರಾಯನದುರ್ಗದಲ್ಲಿ ವಿಷಾಹಾರ ಸೇವಿಸಿ 11 ಮಂಗಗಳ ಸಾವು

ತುಮಕೂರು ದೇವರಾಯನದುರ್ಗ ಅರಣ್ಯದಲ್ಲಿ ಕಾಣಸಿಗವ ಮಂಗಗಳು ಹಾಗೂ ಲಂಗೋರ
ತುಮಕೂರು ದೇವರಾಯನದುರ್ಗ ಅರಣ್ಯದಲ್ಲಿ ಕಾಣಸಿಗವ ಮಂಗಗಳು ಹಾಗೂ ಲಂಗೋರ
Published on

ಪ್ರಮುಖ ಮುಖ್ಯಾಂಶಗಳು

  • ಸಾವು ಮಂಗನ ಖಾಯಿಲೆಯಿಂದಲ್ಲ ಎಂದು ಸ್ಪಷನೆ
  • ಕೋತಿಗಳ ಹೊಟ್ಟೆಯಲ್ಲಿದ್ದ ಅನ್ನದಲ್ಲಿತ್ತು ವಿಷ
  • ಹೆಚ್ಚಿನ ಪರೀಕ್ಷೆಗೆ ಪಶುವೈದ್ಯಕೀಯ ವಿವಿಗೆ
ತುಮಕೂರು: ಸಮೀಪದ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ದುರ್ಗದಹಳ್ಳಿಯಲ್ಲಿ ಕಳೆದ ಮೂರುದಿನಗಳಿಂದ 11ಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿದ್ದು ವಿಷಪ್ರಾಶನದ ಸಾಧ್ಯತೆಯಿದೆ.
ದೇವರಾಯನದ ದುರ್ಗದ ರಸ್ತೆಯ ಹುಣುಸೆ ಮರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಒಂಬತ್ತು ಮಂಗಗಳು ಹಾಗೂ ಎರಡು ಲಂಗೋರ ಮೃತಪಟ್ಟಿದ್ದು ಕಳೇಬರ ಸಂಗ್ರಹಿಸಿ ಪರೀೆಗೆ ಕಳುಹಿಸಲಾಗಿದೆ.
ಊರ್ಡಿಗೆರೆ ಪಶುಆಸ್ಪತ್ರೆಯಲ್ಲಿ ಶವ ಪರೀೆ ನಡೆಸಲಾಗಿದ್ದು ಮೃತಪಟ್ಟಿರುವ ಮಂಗಗಳ ಹೊಟ್ಟೆ ಹಾಗೂ ಕರುಳಿನ ಭಾಗದಲ್ಲಿ ಅನ್ನದ ಪದಾರ್ಥ ಕಂಡುಬಂದಿದ್ದು ಮೇಲ್ನೋಟಕ್ಕೆ ವಿಷ ಪ್ರಾಶನವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಹೆಚ್ಚಿನ ಪರೀೆಗಾಗಿ ಸಂಗ್ರಹಿಸಿರುವ ಮಾದರಿಗಳನ್ನು ಹೆಬ್ಬಾಳದ ಪಶುವೈದ್ಯಕೀಯ ವಿವಿಗೆ ಕಳುಹಿಸಲಾಗಿದೆ. ಮೃತಪಟ್ಟ ಮಂಗಗಳು ಖಾಯಿಲೆಯಿಂದ ಮೃತಪಟ್ಟಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ಕೂಡಲೇ ಭಾನುವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಕೂಡ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸೂಚನೆಗಳನ್ನು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net