ಸಿದ್ಧಗಂಗೆಯಲ್ಲಿ ಕಾಣಿಸಿಕೊಂಡ ಜ್ಯೋತಿಪ್ರಕಾಶ್ ಮಿರ್ಜಿ; ಜೆಡಿಎಸ್ ಮುಖಂಡರು ಸಾಥ್

MIRJIII!!!!!11111
Published on

ತುಮಕೂರು: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ ಸೀಟು ಹಂಚಿಕೆಯಲ್ಲಿ ತುಮಕೂರು ಕ್ಷೇತ್ರ ಒಲಿದುಬಂದರೆ ಅಭ್ಯರ್ಥಿಯಾಗಲು ಜೆಡಿಎಸ್‌ಗೆ ಸೇರ್ಪಡೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ತುಮಕೂರಿನಲ್ಲಿ ಕಾಣಿಸಿಕೊಂಡರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಜತೆ ಸಿದ್ಧಗಂಗಾ ಮಠದಲ್ಲಿ ಕಾಣಿಸಿಕೊಂಡಿರುವ ಮಿರ್ಜಿ, ಶ್ರೀಸಿದ್ಧಲಿಂಗಸ್ವಾಮೀಜಿ ಆಶಿರ್ವಾದ ಪಡೆದಿದ್ದಾರೆ.

ಮೈತ್ರಿ ಮಾತುಕತೆಯಲ್ಲಿ ತುಮಕೂರು ಕ್ಷೇತ್ರದ ಮೇಲೆ ಹಕ್ಕು ಮಂಡಿಸಲು ಸಮರ್ಥ ಅಭ್ಯರ್ಥಿಯ ಕೊರತೆ ಎದುರಿಸುತ್ತಿದ್ದ ಜೆಡಿಎಸ್ ನಿವೃತ್ತ ಐಪಿಎಸ್ ಅಧಿಕಾರಿಯೂ ಆದ, ವೀರಶೈವ ಸಮುದಾಯದ ಮಿರ್ಜಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎಂಬ ಗುಸುಗುಸು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net