ಕುದುರೇ ಇಲ್ಲೆ ಇರುತ್ತದೆ, ಇರಬೇಕು ಎಂಬುದು ನನ್ನ ಆಸೆ; ಡಿ.ಕೆ.ಸುರೇಶ್

28kunigal1_Stud
Published on

ತುಮಕೂರು: ತಾಲೂಕಿನ ರೈತ, ಯುವಕ, ಮಹಿಳೆಯ ಭವಿಷ್ಯವನ್ನು ನಿರ್ಮಾಣ ಮಾಡಬೇಕು ಎಂಬುದು ನಮ್ಮ ಸಂಕಲ್ಪ ಕುಣಿಗಲ್ ಕುದುರೆ ಫಾರ್ಮ್ ಉಳಿವಿಗೆ ನಡೆಯುತ್ತಿರುವ ಹೋರಾಟವೇನು ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.

ತಾಲೂಕಿನ ತಾಲೂಕಿನ ಇಪ್ಪಾಡಿ, ಸಂತೇಮಾವತ್ತೂರು, ಹೇರೂರು ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಕುಣಿಗಲ್‌ನ್ನ ಕುದುರೇ ಇಲ್ಲೆ ಇರುತ್ತದೆ, ಇರಬೇಕು ಎಂಬುದು ನನ್ನ ಆಸೆ, ಕುದುರೇ ಓಡಿಸಲು ಆಗುತ್ತಾ? ಆದರೆ, ವ್ಯವಸ್ಥೆಗಳು ಸರಿಯಾಬೇಕು, ನಾಗರೀಕರಿಗೆ ಮತ್ತು ತಾಲೂಕಿಗೆ ಅನುಕೂಲವಾಗಬೇಕು, ರಾಜಕೀಯ ಗುಂಪು ಕಟ್ಟಿಕೊಂಡು, ಯಾರು ಎಲ್ಲೋ ಚನ್ನಾಗಿರಲು ಕುದುರೆ ಫಾರ್ಮ್ ಬಲಿ ಕೊಡಲು ಸಾಧ್ಯವಿಲ್ಲ ಎಂದರು.

ತಾಲೂಕಿನ ಜನರ ಹಾಗೂ ರೈತರ ಬಹು ನಿರೀಕ್ಷಿತ ಹೇಮಾವತಿ ಲಿಂಕ್ ಕೆನಾಲ್ 950 ಕೋಟಿ ರೂ. ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಇದರ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊAಡಿದ್ದು ಮುಂದಿನ ತಿಂಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net