ಸ್ಟಡ್ ಫಾರ್ಮ್ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಂಸದ ಡಿ.ಕೆ.ಸುರೇಶ್

28kunigal1_Stud
Published on

ಕುಣಿಗಲ್: ಇತಿಹಾಸ ಪ್ರಸಿದ್ಧ ಕುಣಿಗಲ್ ಸ್ಟಡ್ ಫಾರ್ಮ್ ಉಳಿಸಲು ಅಭಿಯಾನ ಜೋರಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ.ಸುರೇಶ್, ಸ್ಟಡ್ ಫಾರ್ಮ್ ಮಾರಾಟ ಮಾಡುವ ಯಾವುದೇ ಚಿಂತನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲೂಕಿನ ಕಿನ್ನಾಮಂಗಲದಲ್ಲಿ ಜನಸಂರ್ಪಕ ಸಭೆಯಲ್ಲಿ ಮಾತನಾಡಿದ ಅವರು, ನಾವು ಯಾರಿಗೂ ಮರಾಟ ಮಾಡಲು ಹೋಗಿಲ್ಲ. ಬೀಗ ಹಾಕಿ ಕೇವಲ ಒಬ್ಬರ ಕೈಗೆ ಕೊಟ್ಟಿದ್ದಿರಿ ಆದರೆ, ನಾವು ಈಗ ಎಲ್ಲರಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಸಿz್ದೆÃವೆ ಎಂದರು.

ಸ್ಟಡ್ ಫಾರ್ಮ್ ಉಳಿಸಿ ಹೋರಾಟ ಹೋರಾಟ ಯಶಸ್ವಿಯಾಗಲಿ ಅವರ ಪರವಾಗಿ ನಾನು ನಿಲ್ಲುತ್ತೇನೆ ಅವರ ಧ್ವನಿಯಾಗುತ್ತೇನೆ. ಅವರ ಹೋರಾಟದಿಂದ ಸ್ಫೂರ್ತಿ ಪಡೆದು ಇನ್ನೂ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ಕುದುರೆ ಫಾರ್ಮ್ ಬಗ್ಗೆ ಯುವಪೀಳಿಗೆಗೂ ಪರಿಚಯಿಸಿದಂತಾಗುತ್ತದೆ ಎಂದರು.

ತಾಲೂಕಿನ ಯುವಕರಿಗೆ ಉದ್ಯೋಗ ಸೃಷ್ಠಿಸುವ ಹಾಗೂ ತಾಲೂಕು ವಿಶೇಷವಾಗಿ ಅಭಿವೃದ್ದಿ ಮಾಡುವ ಕನಸು ನಮ್ಮದು. ಚುನಾವಣೆ ಬಂದಾಗ ಈ ರೀತಿಯ ಆರೋಪ, ಹೋರಾಟ ಸಾಮಾನ್ಯ ಅವರು ಹೋರಾಟ ಮಾಡಿ ನಮ್ಮ ತಪ್ಪುಗಳನ್ನು ಹುಡಿಕಿದರೆ ಅ ತಪ್ಪುಗಳನ್ನು ತಿದ್ದಿಕೊಂಡು ನಾವು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ಅಧಿಕಾರದಲ್ಲಿ ಇದ್ದಾಗ ಮಾಡಲು ಸಾಧ್ಯವಾಗದ ಕೆಲಸಗಳನ್ನು ಈಗ ನಮಗೆ ಮಾಡಲು ಸ್ಫೋರ್ತಿ ನೀಡುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರಿಗೆ ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net