

ಬದಿಯಡ್ಕ: ತುಳು ಲಿಪಿ ಸಂಶೋಧಕ, ಕೇರಳ ತುಳು ಅಕಾಡೆಮಿ ಸ್ಥಾಪಕ ಅಧ್ಯಕ್ಷ ದಿ.ವೆಂಕಟರಾಜ ಪುಣಿಂಚಿತ್ತಾಯರ ಜನ್ಮದಿನಾಚರಣೆಯನ್ನು ತುಳು ಲಿಪಿ ದಿನವನ್ನಾಗಿ ಬದಿಯಡ್ಕದಲ್ಲಿ ಆಚರಿಸಲಾಯಿತು. ತುಳುವೆರೆ ಆಯನೋ ಕೂಟದ ಅಧ್ಯಕ್ಷ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅಧ್ಯಕ್ಷತೆ ವಹಿಸಿದ್ದರು. ಆಶಾಕಿರಣ ಶುಭ ಹಾರೈಸಿದರು. ಗಾಯಕ ರತ್ನಾಕರ ಓಡಂಗಲ್ಲು ತುಳು ಹಾಡು ಹಾಡಿದರು. ಡಾ.ಶ್ರೀನಿಧಿ ಸರಳಾಯ ದಿ.ವೆಂಕಟ್ರಾಜ ಪುಣಿಂಚಿತ್ತಾಯ ಅವರ ಸಾಹಿತ್ಯ ಹಾಗೂ ಬದುಕಿನ ಬಗ್ಗೆ ಮಾತನಾಡಿದರು. ದೀಕ್ಷಿತ್, ಕೃಷ್ಣ ಡಿ.ಬೆಳಿಂಜ, ಹರೀಶ್, ಸುಶ್ಮಿ, ಜಗದೀಶ್ ಮೊದಲಾದವರು ಭಾಗವಹಿಸಿದ್ದರು. ಸುಂದರ ಬಾರಡ್ಕ ವಂದಿಸಿದರು.