

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಅಭಿವೃದ್ಧಿ ಅವಕಾಶಗಳ ನಡುವೆ ನಶಿಸಿ ಹೋಗುತ್ತಿರುವ ವಾನವೀಯ ಸಂಬಂಧಗಳನ್ನು ಬೆಸೆಯುವ ಕಾರ್ಯ ಸಂಘ, ಸಂಸ್ಥೆಗಳಿಂದ ಆಗಬೇಕು. ಸೇವೆಯ ರೂಪದಲ್ಲಿ ಗ್ರಾಮೀಣ ಆರ್ಥಿಕ ದುಃಸ್ಥಿತಿಯ ಕುಟುಂಬಗಳನ್ನು ಗುರುತಿಸಿ ಆರ್ಥಿಕ ಹಾಗೂ ಶೈಕ್ಷಣಿಕ ಸಹಾಯ ನೀಡಬೇಕಿದೆ ಎಂದು ಮುಂಬೈ ಬಂಟರ ಸಂದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದರು.
ಮೂಲ್ಕಿ ಬಂಟರ ಸಂಘ ವತಿಯಿಂದ ಮೂಲ್ಕಿ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಲಾದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನೀರೆ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. 2023-24ನೇ ಸಾಲಿನ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ವಿ.ಕೆ. ಗ್ರೂಪ್ ಚೇರ್ಮನ್ ಕರುಣಾಕರ ಎಂ.ಶೆಟ್ಟಿ ಮಧ್ಯ ಗುತ್ತು ಅವರಿಗೆ ನೀಡಲಾಯಿತು. 2023-24ನೇ ಸಾಲಿನ 230 ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ 3.50 ಲಕ್ಷ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಳೆಪಾಡಿ ಶ್ರೀ ಉವಾಮಹೇಶ್ವರ ದೇಗುಲದ ಮೊಕ್ತೇಸರರಾಗಿ ಆಯ್ಕೆಯಾದ ಕರುಣಾಕರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಮೂಲ್ಕಿ ಬಂಟರ ಸಂದ ಅಧ್ಯಕ್ಷ ಅಶೋಕ್ ಕುವಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಂದಿಕೂರು ಎಜುಕೇಶನ್ ಟ್ರಸ್ಟ್‌ನ ಅನಿಲ್ ಶೆಟ್ಟಿ ಕೋಂಜಾಲುಗುತ್ತು, ಬೆಂಗಳೂರು ಬಂಟರ ಸಂದ ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ ಸಮಿತಿ ಚೇರ್ಮನ್ ಉಮೇಶ್ ಕುವಾರ್ ಶೆಟ್ಟಿ, ಮೂಲ್ಕಿ ಸುಂದರಾಮ ಶೆಟ್ಟಿ, ಟ್ರಸ್ಟ್‌ನ ಟ್ರಸ್ಟಿ ಸುಕುವಾರ ಶೆಟ್ಟಿ, ಬೆಂಗಳೂರು ಬಂಟರ ಸಂದ ಉಮೇಶ್ ಕುವಾರ್ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುವಾರ್ ಹೆಗ್ಡೆ, ಅಧ್ಯಕ್ಷ ಅಶೋಕ್ ಕುವಾರ್ ಶೆಟ್ಟಿ, ಉಪಾಧ್ಯಕ್ಷ ಜೀವನ್ ಕೆ.ಶೆಟ್ಟಿ, ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಶರತ್ ಶೆಟ್ಟಿ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ ಐಕಳ, ಯುವ ವಿಭಾಗದ ಸಂಚಾಲಕ ದಾಮೋದರ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ರೋಹಿಣಿ ಶೆಟ್ಟಿ, ಪ್ರಚಾರ ವಿಭಾಗದ ನಿಶಾಂತ್ ಶೆಟ್ಟಿ ಕಿಲೆಂಜೂರು ಮತ್ತಿತರರಿದ್ದರು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುವಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಸುಧಾರಾಣಿ ನಿರೂಪಿಸಿದರು. ರೋಹಿಣಿ ಶೆಟ್ಟಿ ವಂದಿಸಿದರು.
ಬಂಟರ ಸಂಘ ಬೆಂಗಳೂರು ಮತ್ತು ಜಾಗತಿಕ ಬಂಟರ ಸಂಘದ ಒಕ್ಕೂಟ ಮಂಗಳೂರು ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ, ಮೂಲ್ಕಿ ಸುಂದರರಾಮ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಬಪ್ಪನಾಡು ವಾಗ್ದೇವಿ ದಾಸಪ್ಪ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಕುಬೆವೂರು ಶಾಂತಾ ಸಂಜೀವ ಭಂಡಾರಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಹರೀಶ್ ಶೆಟ್ಟಿ ತೆಂಗಾಳಿ ಪಂಜಿನಡ್ಕ(ಕೃಷಿ), ಮೇಘಶ್ರೀ ಶೆಟ್ಟಿ ಕೊಡೆತ್ತೂರು(ಅಂತಾರಾಷ್ಟ್ರೀಯ ಯೋಗ ಸಾಧಕಿ), ಪ್ರತೀಕ್ಷಾ ಶೆಟ್ಟಿ ಪಂಜ ಮೊಗಪಾಡಿ(ಶಿಕ್ಷಣ), ದೀಪಾ ಎಂ.ಹೆಗ್ಡೆ, ಚರಿಷ್ಮಾ ಶೆಟ್ಟಿ ಬಪ್ಪನಾಡು ಗುತ್ತು(ಡಾಕ್ಟರೇಟ್), ತಸ್ಮಯಿ ಎಂ.ಶೆಟ್ಟಿ ಮಿತ್ತಬೈಲುಗುತ್ತು(ರಾಷ್ಟ್ರೀಯಮಟ್ಟದ ಸ್ಕೇಟರ್) ಅವರನ್ನು ಗೌರವಿಸಲಾಯಿತು.