ಪೊಳಲಿ ಶಾಲೆ, ಹಾಲು ಉತ್ಪಾದಕ ಸಂಘಕ್ಕೆ ನೆರವು

neravu
Published on

ಗುರುಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವದ್ಧಿ ಯೋಜನೆ ವತಿಯಿಂದ ಪೊಳಲಿಯ ಶ್ರೀ ವಿದ್ಯಾ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ವಾಣಕ್ಕೆ 2 ಲಕ್ಷ ರೂ. ಹಾಗೂ ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಕ್ಕೆ 1.50 ಲಕ್ಷ ರೂ. ಮೊತ್ತದ ನೆರವಿನ ಚೆಕ್ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಎಂ. ವಿತರಿಸಿದರು.

ಪೊಳಲಿ ವಲಯದ ಮೇಲ್ವಿಚಾರಕಿ ಹರಿಣಾಕ್ಷಿ ಅಮ್ಮುಂಜೆ, ಒಕ್ಕೂಟದ ಅಧ್ಯಕ್ಷ ಸುಂದರ ಪೂಜಾರಿ, ಕರಿಯಂಗಳ ಒಕ್ಕೂಟದ ಅಧ್ಯಕ್ಷ ಜನಾರ್ದನ ಪುಂಚಮೆ, ವಿದ್ಯಾ ವಿಲಾಸ ಶಾಲಾ ಮುಖ್ಯಶಿಕ್ಷಕಿ ವಾಲಿನಿ, ನಿವೃತ್ತ ಮುಖ್ಯಶಿಕ್ಷಕ ಸುಬ್ರಾಯ ಕಾರಂತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ ನಾವಡ, ತಾ.ಪಂ. ವಾಜಿ ಸದಸ್ಯ ಯಶವಂತ ಕೋಟ್ಯಾನ್, ಶಾಲಾ ಶಿಕ್ಷಕ ವರ್ಗದ ಮೋಹನದಾಸ್, ಗೀತಾ, ರೇಖಾ, ಅಶ್ವಿನಿ, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂದ ಅಧ್ಯಕ್ಷ ರಂಗನಾಥ ಶೆಟ್ಟಿ, ಸಂದ ನಿರ್ದೇಶಕರು, ಕಾರ್ಯದರ್ಶಿ ರಾಮ ಮೂಲ್ಯ ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net