

ಬಂಟ್ವಾಳ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬಿ.ಸಿ.ರೋಡ್ ಶಾಖೆ, ಮಂಗಳೂರು ಆಧಾರ್ ಸೇವಾ ಕೇಂದ್ರ ವತಿಯಿಂದ ಅ.4ರಿಂದ 14ರವರೆಗೆ 10 ದಿನಗಳ ಆಧಾರ್ ಶಿಬಿರ ಪಿಸಿಎಆರ್ಡಿ(ಎಲ್.ಡಿ) ಬ್ಯಾಂಕ್ ಕಟ್ಟಡದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್, ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇಮೇಲ್ ಐಡಿ, ವಿಳಾಸ ತಿದ್ದುಪಡಿ, ಫೋಟೋ ಅಪ್ಡೇಟ್, ಮಕ್ಕಳ 5 ವರ್ಷದ ಮತ್ತು 15 ವರ್ಷದ ಅಪ್ಡೇಟ್, ಪ್ರತಿ 10 ವರ್ಷಕ್ಕೊಮ್ಮೆ ಮಾಡಿಕೊಳ್ಳುವ ಅಪ್ಡೇಟ್ಗಳನ್ನು ಮಾಡಿಕೊಡಲಾಗುವುದು.
ಮಕ್ಕಳ ಆಧಾರ್ ಮಾಡಿಸಿದರೆ ಮಗುವಿಗೆ 5 ವರ್ಷ ತುಂಬಿದ ನಂತರ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ನಂತರ ಮಗುವಿಗೆ 15 ವರ್ಷ ತುಂಬಿದ ಕೂಡಲೇ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. 15 ವರ್ಷದ ಅಪ್ಡೇಟ್ ನಂತರ ಪ್ರತಿಯೊಬ್ಬರೂ 10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್, ಫೋಟೋ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಧಾರ್ ಅಪ್ಡೇಟ್ ಮಾಡಿಕೊಳ್ಳದಿದ್ದರೆ ಸರ್ಕಾರಿ ಸವಲತ್ತು ಪಡೆಯಲು, ಆಸ್ತಿ ನೋಂದಣಿ ಮಾಡಿಸಲು, ಬ್ಯಾಂಕ್ ವ್ಯವಹಾರ ನಡೆಸಲು, ವೈಯಕ್ತಿಕ ದಾಖಲೆ ಮಾಡಿಸಲು ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನಮ್ಮ ಬ್ಯಾಂಕ್ನಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಆಧಾರ್ ಅಪ್ಡೇಟ್ ಮಾಡಿಕೊಳ್ಳದೇ ಇದ್ದರೆ ಆಧಾರ್ ನಿಷ್ಕ್ರಿಯ, ರದ್ದುಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲರೂ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬಂಟ್ವಾಳ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.