

ಕಾಸರಗೋಡು: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪೆರಿಯ ಕ್ಯಾಂಪಸ್‌ನಲ್ಲಿ ಜರುಗಿತು. ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ.ವಿನ್ಸೆಂಟ್ ಮ್ಯಾಥ್ಯೂ ಸ್ಪರ್ಧೆ ಉದ್ಘಾಟಿಸಿದರು.
ಸ್ವಚ್ಛತಾ ಹಿ ಸೇವಾ ನೋಡಲ್ ಅಧಿಕಾರಿ ಪ್ರೊ.ಮನು ಮತ್ತು ದೈಹಿಕ ಶಿಕ್ಷಣ ಸಲಹೆಗಾರ ಡಾ.ಚಂದ್ರಶೇಖರನ್ ಮೇಲತ್ ನೇತೃತ್ವ ವಹಿಸಿದ್ದರು. ಪುರುಷರ ವಿಭಾಗದಲ್ಲಿ ಸಿಯುಕೆ ಬಾಯ್ಸ ಪ್ರಥಮ ಹಾಗೂ ಸೆಕ್ಯುರಿಟಿ ವಿಂಗ್ ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಶಿಕ್ಷಣ ವಿಭಾಗ ಪ್ರಥಮ ಹಾಗೂ ಸಿಯುಕೆ ಗರ್ಲ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.