ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬ

mmmmmmmmmmmm
Published on



ಮಂಗಳೂರು : ಉಡುಪಿ ನಗರದ ಅಜ್ಜರಕಾಡಿನ ಪುರಭವನದಲ್ಲಿ ಶನಿವಾರ ಆರಂಭವಾದ ಎಸ್‌ಬಿಐ ಗೃಹ ಹಾಗೂ ಕಾರು ಸಾಲ ಹಬ್ಬವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಉದ್ಘಾಟಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಲ್ಲೇ ಗೃಹ ಸಾಲ ಮಂಜೂರು ಮಾಡುವಲ್ಲಿ ಮುಂಚೂಣಿಯಲ್ಲಿದೆ .ಸ್ಪರ್ಧಾತ್ಮಕ ದರದಲ್ಲಿ ಸಾಲ ಒದಗಿಸುವ ಎಸ್‌ಬಿಐನ ಸಾಲ ಹಬ್ಬದ ಪ್ರಯೋಜನವನ್ನು ಹೆಚ್ಚಿನ ಗ್ರಾಹಕರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಉದ್ಯಮಿಗಳಾದ ಅಮಿತ್ ಅರವಿಂದ ನಾಯಕ್, ಅರ್ನವ್ ಅಮೀನ್, ರಂಜನ್ ಕಲ್ಕೂರ ಉಪಸ್ಥಿತರಿದ್ದರು.
ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಐ ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಕಚೇರಿಯ ಮುಖ್ಯ ವ್ಯವಸ್ಥಾಪಕ ಕೃಷ್ಣರಾಜ್ ಕೆ. ಭಟ್ ಮಾತನಾಡಿ ‘ ನಿರ್ಮಾಣ ಕ್ಷೇತ್ರದ ಪ್ರತಿನಿಧಿಗಳು ಬ್ಯಾಂಕ್‌ಗಳೊಂದಿಗೆ ಸಾಲ ಪಡೆದು ಜತೆಯಾಗಿ ಪ್ರಯೋಜನ ಪಡೆಯಬೇಕು
ಎಸ್‌ಬಿಐಯ ಸಾಲ ಯೋಜನೆಗಳು ಗ್ರಾಹಕ ಸ್ನೇಹಿಯಾಗಿದ್ದು ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ಹೊಂದಿದೆ ಎಂದರು.
ಸುಪ್ರಿಯಾ ವಂದಿಸಿದರು. ಅಮೃತ ಹಾಗೂ ಮೀರಾ ಕಾರ್ಯಕ್ರಮ ನಿರೂಪಿಸಿದರು.
ಅ.7ರಂದು ಮಧ್ಯಾಹ್ನ 2ರವರೆಗೆ ಸಾಲ ಹಬ್ಬ ನಡೆಯಲಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಇದರ ಪ್ರಯೋಜನ ಪಡೆಯುವಂತೆ ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net