

ಬಾಗಲಕೋಟೆ: ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಬುಧವಾರ ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, 6 ವಾಹನಗಳು ನ್ಜಜುಗುಜ್ಜಾಗಿ ದಿಕ್ಕಾಪಾಲಾಗಿ ಬಿದ್ದಿದ್ದವು.
ಅಪಘಾತಕ್ಕೀಡಾದ ವಾಹನಗಳ ಪೈಕಿ ಎರಡು ಲಾರಿಯಲ್ಲಿ ಚೆಂಡು ಹೂವು ತುಂಬಿತ್ತು, ಮತ್ತೆ ಇನ್ನೆರಡು ಲಾರಿಯಲ್ಲಿ ಸ್ಲ್ಯಾಗ್ ಲೋಡ್ ಮಾಡಲಾಗಿತ್ತು. ಕ್ಯಾಂಟರ್ನಲ್ಲಿ ಕಬ್ಬಿಣದ ಸರಳುಗಳು ಇದ್ದವು.
ಈ ಅಪಘಾತ ಸಂಭವಿಸಿದ್ದೇಗೆ?: ಕಮತಗಿ ಕ್ರಾಸ್ ಬಳಿ ರಸ್ತೆಬದಿ ನಿಂತಿದ್ದ ಒಂದು ಲಾರಿಗೆ ಮತ್ತೊಂದು ಲಾರಿ ಡಿಕ್ಕಿಹೊಡೆಯಿತು. ಹಿಂಬದಿಯಿಂದ ಬಂದ ಮತ್ತೆರೆಡು ಲಾರಿ, 2 ಕ್ಯಾಂಟರ್ಗಳು ಡಿಕ್ಕಿಯಾಗಿದೆ. ಸರಣಿ ಅಪಘಾತದಿಂದ ವಾಹನಗಳು ಅಲ್ಲೊಂದು ಇಲ್ಲೊಂದು ಹೊಲಗತ್ತ ನುಗ್ಗಿವೆ. ಈ ಆರೂ ವಾಹನಗಳು ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಓರ್ವ ಲಾರಿ ಚಾಲಕ ಗಾಯಗೊಂಡಿದ್ದು, ಆತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೀನಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.