More

    ಸಂಬಳ ಕೇಳಿದ್ದಕ್ಕೆ ಗ್ರಾಮ ಸಹಾಯಕಿಯನ್ನು ಮಂಚಕ್ಕೆ ಕರೆದ ತಹಸೀಲ್ದಾರ್!

    ಶಿವಮೊಗ್ಗ: ತಾಲೂಕು ದಂಡಾಧಿಕಾರಿಯ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪದಡಿ ಎಫ್​ಐಆರ್​ ದಾಖಲಾಗಿದ್ದು, ಸದ್ಯ ತಹಸೀಲ್ದಾರ್​ರನ್ನು ಕೆಲಸದಿಂದ ವಜಾ ಮಾಡಲಾಗಿದೆ.

    ಭದ್ರಾವತಿ ತಾಲೂಕಿನ ಕಸಬಾ-2 ಸಿದ್ದಾಪುರ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿ ಬಳಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಸೋಮವಾರ ರಾತ್ರಿ ಭದ್ರಾವತಿ ತಹಸೀಲ್ದಾರ್ ಶಿವಕುಮಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಶಿವಕುಮಾರ್ ಮೊಬೈಲ್ ಸೋಮವಾರ ರಾತ್ರಿಯಿಂದಲೇ ನಾಟ್ ರೀಚಬಲ್ ಆಗಿದೆ. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತಹಸೀಲ್ದಾರ್ ಸಂಪರ್ಕಕಕ್ಕೆ ಯತ್ನಿಸುತ್ತಿದ್ದಾರೆ. ಆದರೆ, ಅವರ ಸುಳಿವು ಸಿಗುತ್ತಿಲ್ಲ. ಇದನ್ನೂ ಓದರಿ ಪ್ರಿಯಕರನಿಂದ ದೇಹ ಸುಖದ ಜತೆಗೆ ಹಣ ಪೀಕಿದಳು, ಕೊನೆಗೆ ಪ್ರಾಣವನ್ನೇ ತೆಗೆದಳು!

    ಆರೋಪ ಏನು?; ಸಕಾಲದಲ್ಲಿ ಸಂಬಳ ನೀಡಿಲ್ಲ. ನಾಲ್ಕು ತಿಂಗಳಿಂದ ವೇತನ ಬಾರದೆ ಸಮಸ್ಯೆ ಆಗುತ್ತಿದೆ. ಸಂಬಳ ಕೊಡಿಸಿ ಎಂದು ಮನವಿ ಮಾಡಲು ಹೋದಾಗ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ ತಹಸೀಲ್ದಾರ್, ಲೈಂಕಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಭದ್ರಾವತಿಯ ಹಳೇ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಫ್‌ಐಆರ್ ಆಗುತ್ತಿದ್ದಂತೆ ತಹಸೀಲ್ದಾರ್ ಶಿವಕುಮಾರ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಶಿವಕುಮಾರ್ ತಡರಾತ್ರಿಯೇ ಆದೇಶ ಹೊರಡಿಸಿದ್ದಾರೆ.

    ತಹಸೀಲ್ದಾರ್ ವಿರುದ್ಧ ಗಂಭೀರ ಆರೋಪದ ಜತೆಗೆ ವಿವಿಧ ಸಂಘಟನೆಗಳ ಪ್ರಮುಖರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ವಿಷಯ ಗಂಭೀರತೆ ಪಡೆಯುತ್ತಿದ್ದಂತೆ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts