ಒಂದು ಗಂಟೆ ಹೆಚ್ಚು ಕೆಲಸ : ಎಸ್.ಎಂ ಕೃಷ್ಣಗೆ ಸೇವೆಯ ಮೂಲಕ ಗೌರವಾರ್ಪಣೆ

New Project (3)
Published on

ಸುಳ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನರಾದ ಹಿನ್ನೆಲೆಯಲ್ಲಿ ಎಲ್ಲೆಡೆ ಬುಧವಾರ ರಜೆ ಸಾರಲಾಗಿದ್ದರೆ ನೆಲ್ಲೂರು ಕೆಮ್ರಾಜೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಒಂದು ಗಂಟೆ ಹೆಚ್ಚು ಕೆಲಸ ಮಾಡಿ ಗೌರವ ಸಲ್ಲಿಸಿದರು.

ಸಂಘದ ಸಿಬ್ಬಂದಿ ಶೋಕಾಚರಣೆ ನಡೆಸಿ ಕಪ್ಪು ಪಟ್ಟಿ ಧರಿಸಿ ಕೆಲಸದಲ್ಲಿ ನಿರತರಾದರು. ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲತೋಟ, ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ಸರ್ಕಾರ ಶೋಕಾಚರಣೆಯ ಪ್ರಯುಕ್ತ ರಜೆ ಘೋಷಣೆ ಮಾಡಿದ್ದರೂ, ನಮ್ಮ ಸಹಕಾರಿ ಸಂಘ ಇಂದು ಒಂದು ಗಂಟೆ ಹೆಚ್ಚು ಕೆಲಸ ಮಾಡಿ ಶೋಕಾಚರಣೆ ಮೂಲಕ ಗೌರವ ಅರ್ಪಿಸುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net