ಮಾರಕಾಯುಧದೊಂದಿಗೆ ಸಂಚರಿಸುತ್ತಿದ್ದಾತ ಅರೆಸ್ಟ್

New Project (18)
Published on

ಕಾಸರಗೋಡು: ಮಾರಕಾಯುಧಗಳೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಬಂಟ್ವಾಳ ಅಮ್ಟಾಡಿ ಲೊರೊಟ್ಟೋ ಗುತ್ತಾರ್ ನಿವಾಸಿ ಆಡ್ಲಿ ಜೋಕಿಂ ಕ್ಯಾಸ್ತಲಿನೋ ಎಂಬಾತನನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ವಿನೋದ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಸಂಚಾರಕ್ಕೆ ಬಳಸಿದ್ದ ಕಾರು ಹಾಗೂ ಚಾಕು, ಮುಖಗವಚ, ಮಚ್ಚುಗತ್ತಿ, ಚಾಕು ಸೇರಿದಂತೆ ವಿವಿಧ ಮಾರಕಾಯುಧ ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬಂದ್ಯೋಡು-ಪೆರ್ಮುದೆ ರಸ್ತೆಯ ಗೋಳಿಯಡ್ಕದ ಹೋಟೆಲ್ ಬಳಿ ಕಾರು ನಿಲ್ಲಿಸಿದ್ದ ಬಗ್ಗೆ ಸಂಶಯಗೊಂಡ ಪೊಲೀಸರು ಸಮೀಪ ತೆರಳುತ್ತಿದ್ದಂತೆ ಕಾರು ಮುಂದಕ್ಕೆ ಚಲಿಸಲಾರಂಭಿಸಿತ್ತು. ತಕ್ಷಣ ಕಾರು ತಡೆದು ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಮಾರಕಾಯುಧ ಪತ್ತೆಯಾಗಿದೆ. ಯಾವ ಉದ್ದೇಶಕ್ಕಾಗಿ ಮಾರಕಾಯುಧದೊಂದಿಗೆ ಸಂಚರಿಸುತ್ತಿದ್ದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net