ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಹಿಂದೆ ಉಳ್ಳಾಲ ಭಾಗದ ಜನರು ಮಂಗಳೂರಿನಿಂದ ದೋಣಿಯ ಮೂಲಕ ಸರಕು, ಸರಂಜಾಮುಗಳನ್ನು ತರುತ್ತಿದ್ದರು. ಗತಕಾಲದ ವೈಭವ ಮರಳಿ ತರುವ ನಿಟ್ಟಿನಲ್ಲಿ ಸೇತುವೆ ನಿರ್ವಾಣಕ್ಕೆ ಶಾಸಕರು ಮುಂದಾಗಿದ್ದು, ಇದರಿಂದ ಮೀನುಗಾರರಿಗೂ ಅನುಕೂಲ ಆಗಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.
ಉಳ್ಳಾಲದ ಕೋಟೆಪುರದಿಂದ ಬೋಳಾರದವರೆಗೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಸೋಮವಾರ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಕೋಟೆಪುರದವರೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಖಾದರ್ ಅಭಿವಾನಿಗಳ ಸಂಭ್ರಮಾಚರಣೆಯ ಮೆರವಣಿಗೆಗೆ ಉಳ್ಳಾಲ ಅಬ್ಬಕ್ಕ ವೃತ್ತದ ಚಾಲನೆ ನೀಡಿ ವಾತನಾಡಿದರು.
ಯು.ಟಿ.ಖಾದರ್ ವಿಧಾನಸಭೆಯ ಅಧ್ಯಕ್ಷರಾದ ಬಳಿಕ ಒಂದೇ ವರ್ಷದಲ್ಲಿ ಕ್ಷೇತ್ರದ ಸರ್ವ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಕೋಟೆಪುರದಿಂದ ಬೋಳಾರಕ್ಕೆ ಸೇತುವೆ ನಿರ್ವಾಣ ಯೋಜನೆ ಐತಿಹಾಸಿಕ ಕಾರ್ಯಕ್ರಮ ಎಂದು ಹೇಳಿದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಮುಖರಾದ ಫಾರೂಕ್ ಉಳ್ಳಾಲ್, ಅಶ್ರಫ್ ಕೆ.ಸಿ.ರೋಡು, ಮುಸ್ತಫಾ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು, ಆಲ್ವಿನ್ ಡಿಸೋಜ, ಚಂದ್ರಿಕಾ ರೈ, ಯೂಸುಫ್ ಉಳ್ಳಾಲ್, ದಿನೇಶ್ ರೈ, ಸುರೇಖಾ ಚಂದ್ರಹಾಸ, ಹಮೀದ್ ಕೋಡಿ ಮತ್ತಿತರರಿದ್ದರು. ಯು.ಪಿ.ಅಯೂಬ್ ಮಂಚಿಲ ಸ್ವಾಗತಿಸಿದರು.
ತಡೆಗೋಡೆ ದುರಸ್ತಿಗೆ ಆಗ್ರಹ : ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿ