ಕೆಎಸ್‌ಎಸ್‌ನಲ್ಲಿ ಸ್ಕೌಟ್ಸ್-ಗೈಡ್ಸ್ ಮೇಳ

Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಪಂಜ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಹಯೋಗದೊಂದಿಗೆ ವಾರ್ಷಿಕ ಮೇಳ ನಡೆಯಿತು. ಕಾಲೇಜು ಆಡಳಿತ ಸಮಿತಿ ಕಾರ್ಯದರ್ಶಿ ಅರವಿಂದ ಅಯ್ಯಪ್ಪ ಸುತಗುಂಡಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಉದ್ಘಾಟಿಸಿದರು.

ಜಿಲ್ಲಾ ಆಯುಕ್ತ ಮಹಮದ್ ತುಂಬೆ, ಕಾರ್ಯದರ್ಶಿ ಪ್ರತಿಮ್ ಕುಮಾರ್, ಪ್ರಮುಖರಾದ ಎಂ.ಜಿ.ಕಜೆ, ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಸ್ಥಳೀಯ ಸಂಸ್ಥೆ ಎ.ಡಿ.ಸಿ. ದೇವಿಪ್ರಸಾದ್ ಜಾಕೆ, ಸಂಸ್ಥೆ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ., ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಪಂಜ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಮಾಧವ ಬಿ.ಕೆ., ಉಪಾಧ್ಯಕ್ಷರಾದ ಸೋಮಶೇಖರ ನೇರಳ, ಬಾಲಕೃಷ್ಣ ಹೇಮಳ, ಕಾರ್ಯದರ್ಶಿ ಉದಯ್ ಕುಮಾರ್ ಬಾಳಿಲ, ರ‌್ಯಾಲಿಯ ಸಂಯೋಜಕರಾದ ಮನೋಹರ್, ಪ್ರಮೀಳಾ ಎನ್, ಸ್ಕೌಟ್ಸ್ ಗೈಡ್ಸ್ ನಾಯಕರಾದ ಅರವಿಂದ ಬಾಳಿಲ, ಸರೋಜಿನಿ ಕರಿಕಳ, ರ‌್ಯಾಲಿಯ ನಿರ್ದೇಶಕ ದಾಮೋದರ ನೇರಳ ಉಪಸ್ಥಿತರಿದ್ದರು.

ಸಮಾಲೋಚನಾ ಸಭೆ ನಡೆಯಿತು. ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಗೈಡ್ಸ್ ವಿಭಾಗದಿಂದ ಹೊರ ಸಂಚಾರ ಮತ್ತು ಸ್ವಚ್ಛತಾ ಅಭಿಯಾನ ನಡೆಯಿತು. ಸ್ಕೌಟ್ಸ್ ವಿಭಾಗಕ್ಕೆ ಸಾಹಸಮಯ ಚಟುವಟಿಕೆ ಆಯೋಜಿಸಲಾಯಿತು. ಸಂಜೆ ನಗರ ಮೆರವಣಿಗೆಯನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ ಉದ್ಘಾಟಿಸಿದರು. ರಾತ್ರಿ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಶಿಬಿರಾಗ್ನಿ ನಡೆಯಿತು.

ರಾಜೇಶ್ ಎನ್.ಎಸ್. ಕಾರ‌್ಯಕ್ರಮ ನಡೆಸಿಕೊಟ್ಟರು. ಗ್ರಾಪಂ. ಸದಸ್ಯ ರಾಜೇಶ್.ಎನ್.ಎಸ್., ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್‌ಪ್ರಸಾದ್ ಎನ್ ಮುಖ್ಯ ಅತಿಥಿಗಳಾಗಿದ್ದರು. ಬಳಿಕ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net