ನಿವೃತ್ತ ಶಿಕ್ಷಕ ಎಂ.ಶಂಕರ್ ಮಾಸ್ಟರ್‌ಗೆ ಗೌರವ

kota
Published on

ಕೋಟ: ಕೋಡಿತಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಂ.ಶಂಕರ್ ಮಾಸ್ಟರ್‌ಗೆ ಊರಿನವರಿಂದ ಬೀಳೊಡುಗೆ, ಗೌರವಾರ್ಪಣೆ ಇತ್ತೀಚೆಗೆ ಶಾಲೆ ವಠಾರದಲ್ಲಿ ನಡೆಯಿತು.

ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಅಧ್ಯಕ್ಷ ಕೆ.ಎಸ್.ಕಾರಂತ, ಪಿಡಿಒ ರವೀಂದ್ರ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಜುಂ, ಬ್ರಹ್ಮಾವರ ವಲಯ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ., ಸದಸ್ಯ ಪ್ರಭಾಕರ್ ಮೆಂಡನ್, ಊರಿನ ಪಟೇಲ ರಾಮದಾಸ ಖಾರ್ವಿ, ಎಸ್‌ಡಿಎಂಸಿ ಅಧ್ಯಕ್ಷ ರಾಮ ಖಾರ್ವಿ, ಹಿರಿಯರಾದ ನರಸಿಂಹ ಖಾರ್ವಿ, ಭೋಜ ಖಾರ್ವಿ, ಮಂಜುನಾಥ ಖಾರ್ವಿ ಕೋಡಿತಲೆ, ಶಿಕ್ಷಕಿ ನಾಗರತ್ನ, ನಿವೃತ್ತ ಶಿಕ್ಷಕ ಶಂಕರ್ ಉಪ್ಪೂರು, ಸಹಾಯಕಿ ಮೋಹಿನಿ ಖಾರ್ವಿ, ವಿದ್ಯಾರ್ಥಿಗಳು, ಪಂಚಶಕ್ತಿ, ವೀರಕೇಸರಿ ಮತ್ತು ಶ್ರೀ ಯಕ್ಷೇಶ್ವರಿ ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪ್ರತಿಮಾ ಸ್ವಾಗತಿಸಿದರು. ಸಹ ಶಿಕ್ಷಕಿ ಸುಪ್ರೀತಾ ವಂದಿಸಿದರು. ಮಹೇಶ್ ಗೋಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net