ಅಂಬೇಡ್ಕರ್ ತತ್ವ-ಸಿದ್ಧಾಂತ, ಆದರ್ಶ ಪಾಲನೆ ಅಗತ್ಯ

gan
Published on

ಕುಂದಾಪುರ: ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ-ಸಿದ್ಧಾಂತ, ಆದರ್ಶ ಪಾಲನೆ ಅಗತ್ಯ. ಎಸ್ಸಿ-ಎಸ್ಟಿ ಸಮುದಾಯದ ಯುವಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.

ಕುಂದಾಪುರ ಗಾಂಧಿ ಮೈದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಗದೀಶ್ ಗಂಗೊಳ್ಳಿ ಸಾರಥ್ಯದಲ್ಲಿ ನಡೆಸುತ್ತಿರುವ ಅಂತಾರಾಜ್ಯಮಟ್ಟದ ‘ಮಹಾನಾಯಕ ಜೈಭೀಮ್’ ಕ್ರಿಕೆಟ್ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಸ್ಥಾಪಕ ಅಧ್ಯಕ್ಷ ಡಾ.ಉದಯಕುಮಾರ್ ತಲ್ಲೂರು, ಚಿಕ್ಕೋಡಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿಕ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ.ಜಾತಿ ವಿಭಾಗ ಅಧ್ಯಕ್ಷ ಜಯಕುಮಾರ್, ಹಾಸನ ಜಿಲ್ಲಾ ವಾಲ್ಮೀಕಿ ನಾಯ್ಕ ಸಂಘ ಅಧ್ಯಕ್ಷ ಧರ್ಮಪ್ಪ ನಾಯ್ಕ, ಹಾಸನ ವಾಲ್ಮೀಕಿ ಸಮಾಜ ಮುಖಂಡರಾದ ಶಿವಪ್ಪ ನಾಯ್ಕ, ಮಧು ನಾಯ್ಕ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ನರಸಿಂಹ ಹಳಗೇರಿ, ರಾಯಲ್ಸ್ ಇಲೆವೆನ್ ತಂಡದ ಸಂಘಟಕ ದಿನೇಶ್ ಎಸ್., ದಸಂಸ ಭೀಮ ಘರ್ಜನೆ ಕುಂದಾಪುರ ತಾಲೂಕು ಸಂಘಟನಾ ಸಂಚಾಲಕ ವಿಜಯ್ ಕೆ.ಎಸ್., ತಾಲೂಕು ಸಂಚಾಲಕ ಮಂಜುನಾಥ, ಪತ್ರಕರ್ತ ಯೋಗೀಶ್ ಕುಂಭಾಶಿ ಮೊದಲಾದವರು ಇದ್ದರು. ಪಂದ್ಯಾವಳಿ ಸಂಯೋಜಕ ಜಗದೀಶ್ ಗಂಗೊಳ್ಳಿ ಸ್ವಾಗತಿಸಿದರು. ಶರತ್ ಕುಂಭಾಶಿ ಕಾರ್ಯಕ್ರಮ ನಿರೂಪಿಸಿದರು. ಫಝಲ್ ಹೊನ್ನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net