ಕುಂದಾಪುರದಲ್ಲಿ ಪವರ್‌ಮೆನ್‌ಗೆ ಗೌರವ

gan (3)
Published on

ಕುಂದಾಪುರ: ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಗಂಗೊಳ್ಳಿ ಮೆಸ್ಕಾಂ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 8 ಜನ ಪವರ್‌ಮೆನ್ ಅವರನ್ನು ಗೌರವಿಸಲಾಯಿತು.

ಗಂಗೊಳ್ಳಿಯ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಪವರ್‌ಮೆನ್ ಅವರಿಗೆ ಕೆಲಸ ಮಾಡಲು ಅವಶ್ಯಕತೆ ಇರುವ ಸೇಫ್ಟಿ ಹೆಲ್ಮೆಟ್‌ನ್ನು ನೀಡಿ ಗೌರವಿಸಿದರು. ರೋಟರಿ ವಲಯ, ಜಿಲ್ಲಾ ನಾಯಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮನಾಥ್ ಚಿತ್ತಾಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net