ಸೀಮಿತ ಅನುದಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ

gurme
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಶಾಸಕನಾಗಿ 2 ವರ್ಷಗಳಿಂದ ಜನಪರ ಹಾಗೂ ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಸೀಮಿತ ಅನುದಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ವಾಡಿಕೊಂಡು ಬಂದಿದ್ದು, ವಿನಾಕಾರಣ ಅಪಾದನೆ ವಾಡುತ್ತಿರುವ ವಾಜಿ ಸಚಿವ ವಿನಯಕುವಾರ್ ಅವರಿಗೆ ಸತ್ಯದರ್ಶನ ವಾಡಲು ನಾನು ಬದ್ಧನಿದ್ದೇನೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸವಾಲು ಹಾಕಿದರು.

ಕಾಪುವಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೂ ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರಾಗಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ವಾತನಾಡುತ್ತಿದ್ದಾರೆ. ಸತ್ಯಾಂಶ ಗೊತ್ತಿದ್ದರೂ ಆಪಾದನೆ ವಾಡಿ ಜನರ ಹಾದಿ ತಪ್ಪಿಸುವ ಕೆಲಸ ವಾಜಿ ಸಚಿವರಿಂದಾಗುತ್ತಿದೆ ಎಂದರು.

ಕಾಪು ಕ್ಷೇತ್ರದಲ್ಲಿ 32,000 ಫಲಾನುಭವಿಗಳ ಪಿಂಚಣಿ ತಡೆ ಹಿಡಿಯುವ ಕೆಲಸ ರಾಜ್ಯ ಸರ್ಕಾರದಿಂದಾಗಿದೆ ಎಂದರು.

ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ವಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುವಾರ್, ಪಕ್ಷದ ಪ್ರಮುಖರಾದ ಗೀತಾಂಜಲಿ ಸುವರ್ಣ, ಗೋಪಾಲಕೃಷ್ಣ ರಾವ್, ಶರಣ್‌ಕುವಾರ್ ಮಟ್ಟು, ಸೋನು ಪಾಂಗಾಳ ಉಪಸ್ಥಿತರಿದ್ದರು.

ಖೇಲೋ ಇಂಡಿಯಾ ಅನುದಾನದಲ್ಲಿ ಹೆಜವಾಡಿಯಲ್ಲಿ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಒದಗಿಸಲು ಪ್ರಸ್ತಾವನೆ ಸಲ್ಲಿಸುತ್ತಿದ್ದು, ಅದು ಪ್ರಗತಿ ಹಂತದಲ್ಲಿದೆ. ಕಾಪು ಲೈಟ್ ಹೌಸ್‌ನಲ್ಲಿ ಗ್ಲಾಸ್ ಬ್ರಿಡ್ಜ್ ಕಾಮಗಾರಿ, ಕಾಮಿನಿ ಹೊಳೆಗೆ ಮೂಲ ಸೌಕರ್ಯ, ಪಡುಬಿದ್ರಿ ಬ್ಲೂ ್ಲ್ಯಾಗ್ ಬೀಚ್‌ನಲ್ಲಿ ಮೂಲ ಸೌಕರ್ಯ, ಕಟಪಾಡಿಯಲ್ಲಿ ಬಹುಬೇಡಿಕೆಯ ಅಂಡರ್ ಪಾಸ್ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಉದ್ಯಾವರದಿಂದ ಹೆಜವಾಡಿವರೆಗಿನ ಸರ್ವಿಸ್ ರಸ್ತೆ ಹಾಗೂ ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸಂಸದರ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ. -ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ https://www.vijayavani.net/let-social-concern-accompany-education https://www.vijayavani.net/udupi-dc-meeting-i-day

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net