ಕ್ರೀಡೆಯಿಂದ ಸವಾಲು ಎದುರಿಸಲು ತರಬೇತಿ

kreede-1
ಕೋಟದ ವಿವೇಕ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಪ್ರೊ.ಕೆ.ಉಮೇಶ ಶೆಟ್ಟಿ ಉದ್ಘಾಟಿಸಿದರು. ವಸಂತ ಶೆಟ್ಟಿ, ವೆಂಕಟೇಶ ಉಡುಪ, ಪ್ರೀತಿರೇಖಾ ಉಪಸ್ಥಿತರಿದ್ದರು.
Published on

ಕೋಟ: ಕ್ರೀಡೆ ನಮ್ಮ ಮನಸ್ಸನ್ನು ಹಗುರಗೊಳಿಸುವುದರ ಜತೆಗೆ ಸವಾಲುಗಳನ್ನು ಎದುರಿಸಲು ತರಬೇತಿ ನೀಡುತ್ತದೆ ಎಂದು ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಕೆ.ಉಮೇಶ ಶೆಟ್ಟಿ ಹೇಳಿದರು.

ಕೋಟದ ವಿವೇಕ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಶುಭಹಾರೈಸಿದರು.

ಆಡಳಿತ ಮಂಡಳಿ ಸದಸ್ಯ ವಸಂತ ಶೆಟ್ಟಿ, ಸಹಶಿಕ್ಷಕ ವೆಂಕಟೇಶ ಉಡುಪ, ಮುಖ್ಯ ಶಿಕ್ಷಕಿ ಪ್ರೀತಿರೇಖಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಕೆ.ಜಗದೀಶ ಹೊಳ್ಳ ವಂದಿಸಿದರು. ನರೇಂದ್ರ ಕುಮಾರ್, ರತಿ ಬಾ, ಶಿವಪ್ರಸಾದ್ ಶೆಟ್ಟಿಗಾರ್ ಹಾಗೂ ಚಂದ್ರಶೇಖರ್ ಎಚ್.ಎಸ್. ಕಾರ್ಯಕ್ರಮ ನಿರೂಪಿಸಿದರು. ಮಮತಾ, ಗಣೇಶ ಶೆಟ್ಟಿ, ವಿಶ್ವನಾಥ ನಾಯಕ್, ರಕ್ಷತ್ ಕ್ರೀಡಾಕೂಟ ನಿರ್ವಹಿಸಿದರು.

ಸಂಸ್ಥೆಯಿಂದ ಗೌರವಾರ್ಪಣೆ

ಸಂಸ್ಥೆಯ ಕ್ರೀಡಾಂಗಣದ ದುರಸ್ತಿಗೆ ಸಹಕರಿಸಿದ ಸುಬ್ರಾಯ ಆಚಾರ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಉಡುಪಿ ಜಿಲ್ಲೆ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಶೋಭಿತ್ ಅವರನ್ನು ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net