ಅಕ್ರಮಕ್ಕುಂಟು ಆಟಕ್ಕಿಲ್ಲ ಮೈದಾನ

kreede
ಗಾಂಧಿ ಮೈದಾನ, ಮೈದಾನದಲ್ಲಿ ಅರ್ಧಕ್ಕೆ ನಿಂತಿರುವ ಗ್ಯಾಲರಿ ಕಾಮಗಾರಿ, ಮೈದಾನದಲ್ಲಿ ಸಂಗ್ರಹಗೊಂಡಿರುವ ಕಸದ ಬೃಹತ್ ರಾಶಿ, ಬಾಟಲಿಗಳು
Published on

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

ಬ್ರಹ್ಮಾವರದ ಗಾಂಧಿಮೈದಾನ ವಿಚಾರವಾಗಿ ತಾಲೂಕಿನ ಯುವಜನತೆ ಸಹಿತ ಕ್ರೀಡಾಪ್ರೇಮಿಗಳ ಬೆಟ್ಟದಂತಹ ನಿರೀಕ್ಷೆ ಹುಸಿಯಾಗಿದ್ದು, ಪ್ರಸ್ತುತ ಮೈದಾನ ಆಟಗಾರರು, ಕ್ರೀಡಾ ಚಟುವಟಿಕೆಗಳಿಗೆ ಬಳಕೆಯಾಗುವ ಬದಲು ಅಕ್ರಮ, ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಬದಲಾಗಿದೆ.

ಮೈದಾನವಿಡಿ ಗಬ್ಬುನಾರುತ್ತಿದ್ದು, ಎರಡು ಬದಿಯ ಗೇಟ್‌ಗಳು ತುಂಡಾಗಿ ಬಿದ್ದಿವೆ. ಮೈದಾನದ ಇನ್ನೊಂದು ಬದಿ ರಾಶಿಗಟ್ಟಲೆ ಗುಜರಿ ಸಾಮಾನು, ಮಣ್ಣಿನ ರಾಶಿ ಸಂಗ್ರಹಗೊಂಡಿದ್ದು, ಈ ನಡುವೆ ಕುರುಚಲು ಗಿಡ, ಪೊದೆಗಳು ಬೆಳೆದು ವಿಷ ಜಂತುಗಳ ವಾಸಸ್ತಾನವೂ ಆಗಿದೆ. ರಾತ್ರಿ ಹೊತ್ತು ರಾಜಾರೋಷವಾಗಿ ಅನೈತಿಕ ಚಟುವಟಿಕಗಳು ನಡೆಯುತ್ತಿದ್ದು, ಸಂಬಂಧಿತ ಅಧಿಕಾರಿಗಳು ಇದುವರೆಗೆ ಕಠಿಣ ಕ್ರಮಕೈಗೊಂಡಿಲ್ಲ.

ಮೈದಾನದಲ್ಲಿ ಕ್ರೀಡಾಭ್ಯಾಸ ನಡೆಸುವ ಮಕ್ಕಳು ಸ್ವತಃ ತಾವೇ ಒಂದು ಭಾಗದ ಮೈದಾನ ಸ್ವಚ್ಛಗೊಳಿಸಿ ನಿತ್ಯವೂ ಅಭ್ಯಾಸ ನಡೆಸುತ್ತಿದ್ದಾರೆ. ಪೊಲೀಸ್ ಪರೇಡ್, ವಿದ್ಯಾರ್ಥಿಗಳ ಪಥಸಂಚಲನ ಸಹಿತ ಯಾವುದೇ ಸರ್ಕಾರಿ ಕಾರ್ಯಕ್ರಮಗಳೂ ಈ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳದೆ ಪಾಳುಬಿದ್ದಿದೆ. ಗಾಂಧಿ ಮೈದಾನದ ದುರವಸ್ಥೆಯಿಂದ ಕ್ರೀಡಾಪಟುಗಳು ಸಹಿತ ಸ್ಥಳೀಯರು ರೋಸಿಹೋಗಿದ್ದು, ಜನಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಶೀಘ್ರವೇ ಕ್ರೀಡಾಂಗಣವನ್ನು ಸುಸಜ್ಜಿತ, ಸುರಕ್ಷಿತಗೊಳಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇಲಾಖೆ ಸುಪರ್ದಿಗೆ ಕ್ರೀಡಾಂಗಣ

ಮೈದಾನ ನಿರ್ಮಾಣಕ್ಕೂ ಮುನ್ನ ಈ ಸ್ಥಳದಲ್ಲಿ ಯಕ್ಷಗಾನ, ಸ್ವಾತಂತ್ರೊೃೀತ್ಸವ ಸಹಿತ ಹಲವು ಕ್ರೀಡಾ ಚಟುವಟಿಕೆಗಳ ನಡೆಯುತ್ತಿರುವ ಕುರಿತು ತಿಳಿದುಕೊಂಡ ಅಂದಿನ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಈ ಕ್ರೀಡಾಂಗಣವನ್ನು ಇಲಾಖೆಗೆ ಹಸ್ತಾಂತರಿಸಿ ಬಳಿಕ ಸುಸಜ್ಜಿತ ವ್ಯವಸ್ಥೆಗಳಿಗಾಗಿ ಕೋಟಿಗಟ್ಟಲೆ ಅನುದಾನ ಮಂಜೂರುಗೊಳಿಸಿದ್ದರು. ಬಳಿಕ ಮಾಜಿ ಸಂಸದ ಕೆ .ಜಯಪ್ರಕಾಶ್ ಹೆಗ್ಡೆ ಸರ್ಕಾರದಿಂದ 2 ಕೋಟಿ ರೂ. ಅನುದಾನ ತರಿಸಿ ಮೈದಾನದಲ್ಲಿ ಆವರಣಗೋಡೆ, ಗ್ಯಾಲರಿ ಸಹಿತ ವಿವಿಧ ಕಾಮಗಾರಿಗಳನ್ನು ಆರಂಭಿಸಿದ್ದರು.

ಕೆಲವು ವರ್ಷದಿಂದ ಪ್ರತಿದಿನ ನಾವು ಅನೇಕ ಯುವಕರು ಕ್ರೀಡಾ ತರಬೇತಿಗಾಗಿ ಗಾಂಧಿ ಮೈದಾನಕ್ಕೆ ಬರುತ್ತಿದ್ದು, ಇದಕ್ಕೆ ಸುಸಜ್ಜಿತ ಕ್ರೀಡಾಂಗಣ ವ್ಯವಸ್ಥೆಯಾಗುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದ ನಮಗೆ ನಿರಾಸೆಯಾಗಿದೆ. ಈ ಮೈದಾನ ಬಹಳ ಕ್ರೀಡಾಪಟುಗಳ ಅಭ್ಯಾಸಕ್ಕೆ ನೆರವಾಗಲಿದ್ದು, ಶೀಘ್ರವೇ ಇದು ಸಮತಯಟ್ಟುಗೊಂಡು ದುರಸ್ತಿಯಾಗಲೇಬೇಕು. -ಪ್ರದೀಪ್ ಶೆಟ್ಟಿ ಕ್ರೀಡಾಪಟು ಬ್ರಹ್ಮಾವರ ಎರಡು ಹಂತದ ಕಾಮಗಾರಿ ಮುಗಿದು ಮುಂದಿನ ಕಾಮಗಾರಿಗೆ 2 ಕೋಟಿ ರೂ. ಹಣದ ಬೇಡಿಕೆಯನ್ನು ಸರ್ಕಾರದ ಮುಂದೆ ಇರಿಸಲಾಗಿದೆ. ಹಣ ಬಂದ ದುರಸ್ತಿಗೊಳಿಸಿ ಕ್ರಿಕೆಟ್ ಸಹಿತ ಎಲ್ಲ ಕ್ರೀಡೆಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. -ಡಾ. ರೋಶನ್ ಕುಮಾರ್ ಶೆಟ್ಟಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೆಶಕ https://www.vijayavani.net/sharada-littlerock-school-winners https://www.vijayavani.net/ajekaru-zone-sankirtana-bhajan

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net