ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದ ಉಡುಪಿ ಜಿಲ್ಲೆಯ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಅಂತರ್ ಶಾಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಉಡುಪಿಯ ಶಾರದಾ ವಸತಿ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಬ್ರಹ್ಮಾವರದ ಲಿಟಲ್‌ರಾಕ್ ಇಂಡಿಯನ್ ಸ್ಕೂಲ್ ಪ್ರಥಮ ಸ್ಥಾನ ಪಡೆಯಿತು.
ಬಾಲಕರ ವಿಭಾಗದಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನ ಪಡೆದುಕೊಂಡವು.
14 ವರ್ಷದೊಳಗಿನ ಬಾಲಕಿಯರ ಪೈಕಿ ಬ್ರಹ್ಮಾವರದ ಲಿಟಲ್‌ರಾಕ್ ಇಂಡಿಯನ್ ಸ್ಕೂಲ್ ಪ್ರಥಮ ಮತ್ತು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ ಸ್ಥಾನ ಗಳಿಸಿದವು. 14 ವರ್ಷದೊಳಗಿನ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಮಣಿಪಾಲದ ಮಾಧವ ಕೃಪಾ ಸ್ಕೂಲ್ ಪ್ರಥಮ ಮತ್ತು ಕಾರ್ಕಳದ ಶ್ರೀ ರವಿಶಂಕರ ವಿದ್ಯಾಮಂದಿರ ದ್ವಿತೀಯ ಸ್ಥಾನ ಪಡೆದುಕೊಂಡವು.
ಉದ್ಘಾಟನಾ ಸಮಾರಂಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮಾಜಿ ಟ್ರಸ್ಟಿ ಜಯಾನಂದ ಹೋಬಳಿದಾರ್, ಬ್ಯಾಡ್ಮಿಂಟನ್‌ನ ರಾಷ್ಟ್ರೀಯ ತೀರ್ಪುಗಾರ್ತಿ ಶಾಲಿನಿ ಎಸ್. ಶುಭ ಹಾರೈಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಶರಣಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪದಲ್ಲಿ ಬ್ಯಾಡ್ಮಿಂಟನ್ ಕೋಚ್ ರಾಜೇಶ್ ನಾಯರ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಶರಣಕುಮಾರ, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ, ಉಪಪ್ರಾಂಶುಪಾಲ ರಾಮ ದೇವಾಡಿಗ, ಉಡುಪಿ ಜಿಲ್ಲೆಯ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಸ್ಟ್ ಡಿಫೆಂಡರ್, ಸ್ಮಾೃಷರ್ ಪ್ರಶಸ್ತಿ
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಯಶಸ್ವಿನಿ ಬೆಸ್ಟ್ ಡಿಫೆಂಡರ್, ಜೇಷ್ಮಾ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿಗಳನ್ನು ಸ್ವೀಕರಿಸಿದರು.ಬಾಲಕರ ಪೈಕಿ ಈಶಾನ್ ಹೆಗ್ಡೆ ಬೆಸ್ಟ್ ಡಿಫೆಂಡರ್, ವೈಭವ್ ಶೆಟ್ಟಿ ಬೆಸ್ಟ್ ಸ್ಮ್ಯಾಷರ್ ಪ್ರಶಸ್ತಿ ಪಡೆದರು. 17 ವರ್ಷದ ಬಾಲಕಿಯರಲ್ಲಿ ಸಾನ್ವೀ ಆಚಾರ್ಯ ಬೆಸ್ಟ್ ಡಿಫೆಂಡರ್, ಸಾಚಿ ಶೆಟ್ಟಿ ಬೆಸ್ಟ್ ಸ್ಮಾೃಷರ್‌ಗೆ ಭಾಜನರಾದರು. ಬಾಲಕರ ಪೈಕಿ ಕ್ಷಿತಿಜ್ ಬೆಸ್ಟ್ ಡಿಫೆಂಡರ್, ಹಿತಾರ್ಥ ಬೆಸ್ಟ್ ಸ್ಮಾೃಷರ್ ಪ್ರಶಸ್ತಿ ಪಡೆದರು.