ಅಜೆಕಾರು ವಲಯ ಸಂಕೀರ್ತನೆ ಭಜನೆ

bhajane-1
ಕಾರ್ತಿಕ ಮಾಸದ ಸಂಕೀರ್ತನೆ, ಭಜನೆ, ಶೋಭಾನೆ, ಅಷ್ಟಾವಧಾನ ಕಾರ್ಯಕ್ರಮ, ಅಜೆಕಾರು ಗುಡ್ಡೆಯಂಗಡಿ ಹರಿವಾಯು ಕೃಪಾದಲ್ಲಿ ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
Published on

ಹೆಬ್ರಿ: ಅಜೆಕಾರು ವಲಯ ಬ್ರಾಹ್ಮಣ ಸಂಘ ಆಶ್ರಯದಲ್ಲಿ ಕಾರ್ತಿಕ ಮಾಸದ ಸಂಕೀರ್ತನೆ, ಭಜನೆ, ಶೋಭಾನೆ, ಅಷ್ಟಾವಧಾನ ಕಾರ್ಯಕ್ರಮ, ಅಜೆಕಾರು ಗುಡ್ಡೆಯಂಗಡಿ ಹರಿವಾಯು ಕೃಪಾದಲ್ಲಿ ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ನಡೆಯಿತು.

ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಮಾತನಾಡಿ, ದೀಪಾವಳಿ ಹಬ್ಬದ ನಂತರ ಕಾರ್ತಿಕ ಮಾಸದಲ್ಲಿ ಪ್ರತಿ ದಿನ ತುಳಸಿ ದೇವಿಗೆ ಭಕ್ತಿಯಿಂದ ನಡೆಯುವ ವಿಶೇಷ ಸೇವೆಯೇ ಸಂಕೀರ್ತನೆ ಸೇವೆ. ತುಳಸಿ ಸಂಕೀರ್ತನೆ ಒಂದು ವಿಶಿಷ್ಟ ಕಲೆ, ಅದರದ್ದೇ ಆದ ಮಹತ್ವ ಇದೆ. ತಾಳಬದ್ಧವಾದ ಕುಣಿತ, ಹಾಡುಗಾರಿಕೆಯ ಸಮ್ಮಿಲನವೇ ತುಳಸಿ ಸಂಕೀರ್ತನೆ ಎಂದರು.

ಅಜೆಕಾರು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ ಪುತ್ರಾಯ, ಕಾರ್ಯದರ್ಶಿ ಪವನ್ ಕುಮಾರ್, ಸದಸ್ಯರು, ಮಹಿಳೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net