ನಾಳೆ ಈ ಪ್ರದೇಶಗಳಲ್ಲೆಲ್ಲ ನೀರು ಪೂರೈಕೆ ಗಂಟೆಗಟ್ಟಲೆ ಇರಲ್ಲ!

Water Front
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದ್ದು, ಸುಮಾರು ಮೂರು ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ವತಿಯಿಂದ ಶ್ರೀಗಂಧ ಕಾವಲ್ ಪಂಪ್‌ಹೌಸ್‌ನಲ್ಲಿರುವ 375 ಎಚ್‌ಪಿ ಪಂಪ್ ದುರಸ್ತಿ ಕಾರ್ಯಾಚರಣೆ ನಡೆಯುವ ಹಿನ್ನೆಲೆಯಲ್ಲಿ ಶನಿವಾರ ( ಮೇ 14) ಮೂರು ಗಂಟೆ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಶಿವನಹಳ್ಳಿ, ಮಹಾಗಣಪತಿ ನಗರ, ಮಂಜುನಾಥನಗರ, ಜಡ್ಜಸ್ ಕಾಲನಿ, ಬೋವಿ ಕಾಲನಿ, ಇಂದಿರನಾಗರ ಸ್ಲಂ, ಕಾವೇರಿ ನಗರ, ಕರ್ನಾಟಕ ಲೇಔಟ್, ಗೃಹಲಕ್ಷ್ಮೀ ಲೇಔಟ್, ಎಸ್‌ಬಿಐ ಸ್ಟಾಫ್​ ಕಾಲನಿ, ಸಂಜಯಗಾಂಧಿನಗರ, ಶಕ್ತಿ ಗಣಪತಿ ನಗರ, ಬಿಇಎಂಎಲ್ ಲೇಔಟ್, ಕಮಲನಗರ ಸ್ಲಂ, ಕಿರ್ಲೋಸ್ಕರ್ ಲೇಔಟ್, ಕರೆಕಲ್ಲು, ಜೆ.ಸಿ.ನಗರ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಕಂಠೀರವ ಕಾಲನಿ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್ ಸೇರಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net