ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

dharavada accident asha
Published on

ಧಾರವಾಡ: ಇಟ್ಟಿಗಟ್ಟಿ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್​ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಬದುಕುಳಿದವರ ಪೈಕಿ ಆಶಾ ಎಂಬುವವರಿಗೆ ಪ್ರಜ್ಞೆ ಬಂದಿದ್ದು, ಅಪಘಾತದ ಆ ಕ್ಷಣವನ್ನು ಆಸ್ಪತ್ರೆಯ ಬೆಡ್​ ಮೇಲೆ ಮಲಗಿದ್ದಲ್ಲೇ ಪೊಲೀಸರ ಬಳಿ ವಿವರಿಸಿದ್ದಾರೆ.

'ನಾವೆಲ್ಲ ಎಲ್.ಕೆ.ಜಿ ಯಿಂದ ಒಟ್ಟಿಗೆ ಓದಿಕೊಂಡು ಬೆಳೆದ ಸ್ನೇಹಿತರು. ಹದಿನೇಳು ಜನ ಗೋವಾಗೆ ರಿಲ್ಯಾಕ್ಸ್​ಗಾಗಿ ಹೊರಿಟಿದ್ವಿ. ರೆಸಾರ್ಟ್ ಕೂಡ ಬುಕ್ ಮಾಡಿಕೊಂಡಿದ್ವಿ. ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಎಲ್ಲರೂ ಸೇರಿ ಪ್ರವಾಸದ ಪ್ಲ್ಯಾನ್ ಮಾಡಿದ್ವಿ. ನನ್ನ ಕಜೀನ್‌ಗೆ ಫೋನ್ ಮಾಡಿ ಧಾರವಾಡಕ್ಕೆ ಬರೋ ಬಗ್ಗೆ ಹೇಳಿದ್ವಿ... ಅಷ್ಟರಲ್ಲಿ...' ಎನ್ನುತ್ತಲೇ ಬಿಕ್ಕಳಿಸುತ್ತ ಅತ್ತರು. ಇದನ್ನೂ ಓದಿರಿ ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

'ನಾವೆಲ್ಲ ಪ್ರವಾಸಕ್ಕೆ ಹೊರಟಿದ್ದು ಟೆಂಪೋ ಟ್ರಾವೆಲರ್​ನಲ್ಲಿ. ನಾನು ಹಿಂದಿನ ಸೀಟ್​ನಲ್ಲಿ ಕುಳಿತಿದ್ದೆ. ಅಪಘಾತ ಆಗುವ ಮುನ್ನ ನಾನು ಮಲಗಿದ್ದೆ. ಅಪಘಾತ ಆದಾಗ ಸಡನ್ ಆಗಿ ಎದ್ದೆ. ಆಗ ನನ್ನ ಕೈಯಲ್ಲಿ ಮೊಬೈಲ್ ಇತ್ತು. ಆ ಕೂಡಲೇ ನನ್ನ ಕಜೀನ್‌ಗೆ ಕಾಲ್​ ಮಾಡಿ ವಿಷಯ ಹೇಳಿದೆ. ಮತ್ತೆ ಮನೆಯವರಿಗೆ ನನ್​ ಫ್ರೆಂಡ್​ ಗಂಡನಿಗೂ ಕಾಲ್​ ಮಾಡಿ ಆಕ್ಸಿಡೆಂಟ್​ ಆಗಿದೆ ಎಂದು ತಿಳಿಸಿದೆ. ಅವರೆಲ್ಲರೂ ಈಗ ಹೇಗಿದ್ದಾರೆ ಸರ್​... ಹೇಳಿ ಸರ್...' ಎಂದು ಆಶಾ ಕಣ್ಣೀರು ಸುರಿಸುತ್ತಾ ಪೊಲೀಸರನ್ನು ಕೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net