

ಕಾರವಾರ: ಬಂಗಾರ ಆಭರಣ ಕಲಾವಿದ ಕಡವಾಡದ ಮಿಲಿಂದ ಉದಯಕಾಂತ ಅಣ್ವೇಕರ್ ಅವರು ಬೆಳ್ಳಿಯಲ್ಲಿ ಅತಿ ಸಣ್ಣ ವಿಜಯ ರಥ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ.
ಕೇವಲ 36 ಗ್ರಾಂ ಬೆಳ್ಳಿಯಲ್ಲಿ ಅವರು ರಥ ತಯಾರಿಸಿದ್ದು, ಅದು ಒಂದೂಕಾಲು ಇಂಚು ಉದ್ದ, ಮೂರು ಇಂಚು ಅಗಲವಿದೆ. ರಥಕ್ಕೆ ನಾಲ್ಕು ಕುದುರೆಗಳು, ದ್ವಜಸ್ಥಂಬ ಹಾಗೂ ಅದರ ಮೇಲೆ ಸಣ್ಣ ಹನುಮಂತನ ಮೂರ್ತಿಯನ್ನೂ ಚಿತ್ರಿಸಲಾಗಿದೆ.
ಮಿಲಿಂದ್ 2013ರಲ್ಲಿ ರಚಿಸಿದ ಬಂಗಾರದ ಅತಿ ಚಿಕ್ಕ ಕಲೆ ಲಿಮ್ಕಾ ಬುಕ್ನಲ್ಲಿ ದಾಖಲಾಗಿತ್ತು. 2019ರಲ್ಲಿ ರಚಿಸಿದ ಇನ್ನೊಂದು ಕಲಾಕೃತಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.