More

    ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!

    ನವದೆಹಲಿ: ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಹೃದಯಾಘಾತ, ಕ್ಯಾನ್ಸರ್‌ ಸೇರಿದಂತೆ ಸಾವಿರಾರು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯನ್ನು ಸುಲಭವಾಗಿ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್​ ಭಾರತ್​ ಯೋಜನೆಯ ನಕಲಿ ವೆಬ್​ಸೈಟ್​ ಒಂದನ್ನು ತೆರೆಯಲಾಗಿದ್ದು, ಇಲ್ಲಿ ಉದ್ಯೋಗ ಕೊಡುವ ಆಮಿಷ ಒಡ್ಡುತ್ತಿರುವುದು ಬೆಳಕಿಗೆ ಬಂದಿದೆ.

    ಆಯಷ್ಮಾನ್​ ಯೋಜನೆ ಇರುವುದು ಬಡ ಕುಟುಂಬಗಳ ವೈದ್ಯಕೀಯ ಸೌಲಭ್ಯಕ್ಕೆ ಮಾತ್ರ. ಈ ಯೋಜನೆ ಅಡಿ ಬಡ ಕುಟುಂಬಕ್ಕೆ (ಬಿಪಿಎಲ್‌) ವಾರ್ಷಿಕ 5 ಲಕ್ಷ ರೂ. ಮೊತ್ತದ ವೈದ್ಯಕೀಯ ಚಿಕಿತ್ಸಾ ವೆಚ್ಚ ಉಚಿತವಾಗಿದೆ. ಬಡತನದ ರೇಖೆಗಿಂತ ಮೇಲೆ ಇರುವ ಎಪಿಎಲ್‌ ಕುಟುಂಬಕ್ಕೆ, ಚಿಕಿತ್ಸಾ ವೆಚ್ಚದ (ಪ್ಯಾಕೇಜ್‌ ದರ) ಶೇ.30ರಷ್ಟು ನೆರವು, ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ತನಕ ಸಿಗಲಿದೆ.

    ಆದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಇರುವ ಈ ಯೋಜನೆ ಅಡಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸುವ ಜಾಲವೊಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉಮೇಶ್​, ರಜತ್​ ಸಿಂಗ್​, ಗೌರವ್​ ಮತ್ತು ಸೀಮಾ ರಾಣಿ ಶರ್ಮ ಎಂಬುವವರನ್ನು ದೆಹಲಿ ಪೊಲೀಸರು ಇದಾಗಲೇ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದರ ಹಿಂದೆ ಇನ್ನೆಷ್ಟು ಮಂದಿ ಇದ್ದಾರೆಯೋ ಬೆಳಕಿಗೆ ಬರಬೇಕಿದೆ.

    ಇದನ್ನೂ ಓದಿ: ಬಿಜೆಪಿಯೇತರ ರಾಜ್ಯಗಳಲ್ಲಿಯೂ ಮೋದಿಗೇ ಅಧಿಕ ಫ್ಯಾನ್ಸ್​: ಸಮೀಕ್ಷೆಯಿಂದ ಬಯಲು

    ಈ ಜಾಲ ವಾರ್ಡ್ ಬಾಯ್, ನರ್ಸ್, ಲ್ಯಾಬ್ ಅಸಿಸ್ಟೆಂಟ್ಸ್, ಫಾರ್ಮಾಸಿಸಿಸ್ಟ್​, ಆಯುಷ್ ಮಿತ್ರ ಮುಂತಾದ 5 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುವುದಾಗಿ ಆಮಿಷ ಒಡ್ಡಿ ಇದಾಗಲೇ ಆರು ರಾಜ್ಯಗಳಲ್ಲಿ 4200ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲು ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

    ವಾಟ್ಸ್​ಆ್ಯಪ್​ ಮತ್ತು ಎಸ್​ಎಂಎಸ್​ಗಳ ಮೂಲಕ ಉದ್ಯೋಗ ದೊರಕಿಸಿಕೊಡುವ ಆಮಿಷ ಒಡ್ಡುವ ಈ ಗುಂಪು, ಅಲ್ಲಿ ಲಿಂಕ್​ ಕೊಟ್ಟು, ಅದರ ಮೇಲೆ ಕ್ಲಿಕ್​ ಮಾಡುವಂತೆ ಹೇಳುತ್ತಾರೆ. ಉದ್ಯೋಗಾಕಾಂಕ್ಷಿಗಳು ಕ್ಲಿಕ್​ ಮಾಡಿದ ತಕ್ಷಣ ಅವರ ವೈಯಕ್ತಿಕ ಮಾಹಿತಿ ಇತ್ಯಾದಿಗಳನ್ನು ಪಡೆದುಕೊಂಡು ಹಣ ವಸೂಲು ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರು ಎಚ್ಚರಿಸಿದ್ದಾರೆ.

    ಅಧಿಕೃತ ವೆಬ್​ಸೈಟ್​ https://pmjay.gov.in 

    ಇದನ್ನು ಹೊರತುಪಡಿಸಿ ಆಯುಷ್ಮಾನ್​ ಯೋಜನೆಯ ಹೆಸರು ಹೇಳಿ ಯಾವುದೇ ವೆಬ್​ಸೈಟ್​ ಲಿಂಕ್​ ಬಂದರೆ ಕ್ಲಿಕ್​ ಮಾಡಬೇಡಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.

    ಆರೋಗ್ಯದಿಂದಿರುವ ಖ್ಯಾತ ನಟಿಗೆ ಕರೊನಾ: ಅತ್ತೆಯಿಂದ ಅಂಟಿಕೊಂಡ ಮಹಾಮಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts